ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಎಸ್ ಟಿಇ ಬೋಧಕ ಘಟಕಕ್ಕೆ ಪ್ರತಿಷ್ಠಿತ “ಕರ್ನಾಟಕ ರಾಜ್ಯ ವಿಭಾಗದ ಉತ್ತಮ ಐಎಸ್ ಟಿಇ ಫ್ಯಾಕಲ್ಟಿ ಚಾಪ್ಟರ್ ಘಟಕ ಪ್ರಶಸ್ತಿ”ಯು ಲಭಿಸಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು 22 ಶನಿವಾರ 2024ರಂದು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್, ಭುವನೇಶ್ವರಮ್ ಇಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ನಡೆದ 53ನೇ ಐಎಸ್ ಟಿಇ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಶಸ್ತಿಯನ್ನು ಕಾಲೇಜಿಗೆ ನೀಡಿ ಗೌರವಿಸಲಾಯಿತು. ಕಾಲೇಜಿನ ಐಎಸ್ ಟಿಇ ಅಧ್ಯಾಪಕರ ಘಟಕವು ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ 2022-23ನೇ ಸಾಲಿನಲ್ಲಿ ನಡೆಸಿದ ಹಲವಾರು ಕಾರ್ಯಕ್ರಮಗಳನ್ನು ಮೆಚ್ಚಿ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಐಎಸ್ ಟಿಇ ವತಿಯಿಂದ ನೀಡಲಾಗಿದೆ. ಸಂಸ್ಥೆಯ ಪರವಾಗಿ ಐಎಸ್ ಟಿಇ ಘಟಕದ ಸಂಯೋಜಕರಾದ ಶ್ರೀ ಚೇತನ್ ಆರ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಎರಡನೇ ಬಾರಿ ಸಂಸ್ಥೆಗೆ ಈ ಪ್ರಶಸ್ತಿ ದೊರಕಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಕಾರ್ಯದರ್ಶಿಯವರಾದ ರತ್ನಕುಮಾರ್ ಮತ್ತು ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ರವರು ಹರ್ಷ ವ್ಯಕ್ತಪಡಿಸಿದ್ದಾರೆ.