ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾಸೈನ್ಸ್ ವಿಭಾಗದ ವಿದ್ಯಾರ್ಥಿನಿ ಹಾಗೂ ಎನ್ಸಿಸಿ ಕೆಡೆಟ್ ಅರ್ಪಿತಾ ತಂತ್ರಿ ಇವರು 26 ಜನವರಿ 2025 ರಂದು ನವದೆಹಲಿಯ ರಾಜ್ಪಥ್ನಲ್ಲಿ ನಡೆಯುವ 76ನೇ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ಕರ್ನಾಟಕ ಗೋವಾ ನಿರ್ದೇಶನಾಲಯ, ಇದರ ಮಂಗಳೂರು ಸಮೂಹದ ಸದಸ್ಯೆಯಾಗಿರುವ 4 Kar Engr Coy ಕೆಡೆಟ್ ಅರ್ಪಿತಾ ತಂತ್ರಿ ಇವರು ಭಾರತದ ಅತ್ಯಂತ ಗೌರವಾನ್ವಿತ ರಾಷ್ಟçಮಟ್ಟದ ವೇದಿಕೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.
ಕೆಡೆಟ್ ಅರ್ಪಿತಾ ತಂತ್ರಿಯವರು ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಎನ್ಸಿಸಿ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.