ಫೆ. 15 ರಂದು ಕುತ್ಯಾರಿನ ಶ್ರೀ ಶಕ್ತಿ ಮಹಾಗಣಪತಿ, ಶ್ರೀ ಮಹಾಕಾಳಿ, ಶ್ರೀ ಮಂತ್ರದೇವತೆ, ಶ್ರೀ ವರ್ತೇಶ್ವರೀ, ಶ್ರೀ ದೇವಿ ಕಲ್ಕುಡ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ

ಉಡುಪಿ: ಶ್ರೀ ಶಕ್ತಿ ಮಹಾಗಣಪತಿ, ಶ್ರೀ ಮಹಾಕಾಳಿ, ಶ್ರೀ ಮಂತ್ರದೇವತೆ, ಶ್ರೀ ವರ್ತೇಶ್ವರೀ, ಶ್ರೀ ದೇವಿ ಕಲ್ಕುಡ ಪುಣ್ಯಕ್ಷೇತ್ರ ಹೊಸಮನೆ, ಕುತ್ಯಾರು ಇಲ್ಲಿ ವಾರ್ಷಿಕ ನೇಮೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಫೆ. 15 ರಂದು ನಡೆಯಲಿದೆ.

ಬೆಳಿಗ್ಗೆ ಗಂಟೆ 6.00ರಿಂದ 7.00ರ ತನಕ ತುಲಾಭಾರ ಸೇವೆ, ಮಧ್ಯಾಹ್ನ 12.00 ರಿಂದ ಮಹಾ ಅನ್ನಸಂತರ್ಪಣೆ ರಾತ್ರಿ ಶ್ರೀ ಮಂತ್ರದೇವತೆ, ಶ್ರೀ ವರ್ತೇಶ್ವರೀ, ಶ್ರೀ ದೇವಿ ಕಲ್ಕುಡ ದೈವಗಳ ನೇಮೋತ್ಸವ ಮರುದಿನ ಬೆಳಿಗ್ಗೆ 5.00 ರಿಂದ 8.00ರ ವರೆಗೆ ಜಟ್ಟಿಗ, ಗುಳಿಗ, ಕೊರಗಜ್ಜನ ನೇಮೋತ್ಸವ ನಡೆಯಲಿದೆ.