ಹಿರಿಯಡಕ :ಫಿಸಿಯೋಥೆರಪಿ ಘಟಕ ಉದ್ಘಾಟನೆ

ಹಿರಿಯಡಕ: ಫಿಸಿಯೋಥೆರಪಿ ಘಟಕದ ಉದ್ಘಾಟನಾ
ಕಾರ್ಯಕ್ರಮ ಹಾಗೂ ದಿವ್ಯಾಂಗರಿಗೆ ಫಿಸಿಯೋಥೆರಪಿ ಶಿಬಿರವು ಇಂದು ಹಿರಿಯಡ್ಕದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.ಮಣಿಪಾಲ ಮಾಹೆಯ ಎಮ್.ಸಿ.ಹೆಚ್.ಪಿ ಡಾ. ಅರುಣ್ ಮಯ್ಯ
ಕಾರ್ಯಕ್ರಮ ಉದ್ಘಾಟಿಸಿ, ಎಂಡೋಸಲ್ಫಾನ್ ಸೇರಿದಂತೆ ದೈಹಿಕ ಅಂಗವಿಕಲತೆ ಇರುವ ಎಲ್ಲಾ ದಿವ್ಯಾಂಗರು ಈ ಘಟಕದಲ್ಲಿ ದೊರಕುವ ಫಿಸಿಯೋಥೆರಪಿ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್ ಮಾತನಾಡಿ, ಈ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಫಿಸಿಯೋಥೆರಪಿ ಘಟಕವನ್ನು ಪ್ರಾರಂಭಿಸಲಾಗಿದ್ದು, ಸ್ಥಳೀಯ
ದಿವ್ಯಾಂಗರು ಸದ್ರಿ ಘಟಕದಲ್ಲಿ ಲಭ್ಯವಿರುವ ಸೇವೆಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಎಂಡೋಸಲ್ಫಾನ್ ಕಾರ್ಯಕ್ರಮದ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಜಿ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಧ್ಯೇಯೋದ್ಧೇಶ ಹಾಗೂ ಫಿಸಿಯೋಥೆರಪಿ ಘಟಕದ ಕಾರ್ಯವೈಖರಿ
ಬಗ್ಗೆ ಮಾಹಿತಿ ನೀಡಿದರು.

ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಒನ್ ಗುಡ್ ಸ್ಟೆಪ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಅಮಿತಾ ಪೈ, ಡಾ. ರಾಜೇಶ್ ನಾವಡ ಜಿ.ವಿ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯಡಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆಢಳಿತ
ವೈದ್ಯಾಧಿಕಾರಿ ಡಾ.ಸತ್ಯಶಂಕರ್ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ನಿರೂಪಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಾಬಾಯಿ ಕೆ. ವಂದಿಸಿದರು.

ಶಿಬಿರದಲ್ಲಿ ೧೦೦ ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಇವರಲ್ಲಿ ೩೦ ಮಂದಿ ಫಿಸಿಯೋಥೆರಪಿ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇವರನ್ನು ನೋಂದಾವಣೆ ಮಾಡಿಕೊಂಡು, ಮುಂದಿನ ದಿನಗಳಲ್ಲಿ
ನಿಯಮಿತವಾಗಿ ಫಿಸಿಯೋಥೆರಪಿ ಸೇವೆ ನೀಡಲಾಗುತ್ತದೆ.