ಮಣಿಪಾಲ:“ನೈಪುಣ್ಯ ಸಿರಿ” ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕಾರ್ಯಗಾರವು ರೋಟರಿ ಐಸಿರಿ ಪರ್ಕಳ ಹಾಗೂ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲ ಇವರ ಸಹ ಪ್ರಾಯೋಜಕತ್ವದಲ್ಲಿ 5.4.2025 ಶನಿವಾರದಂದು, 10ರಿಂದ 1 ವರೆಗೆ, ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ನಡೆಯಿತು.

ಸುಮಾರು 15 ಶಿಕ್ಷಕರು ಕಾರ್ಯಾಗಾರದ ಸದುಪಯೋಗವನ್ನು ಪಡೆದರು. ತಾವೇ ಸ್ವತಃ ತಯಾರಿಸಬಹುದಾದ ಕಲಿಕಾ ಉಪಕರಣಗಳು, ಅವುಗಳ ಉಪಯೋಗ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಅವುಗಳ ಪಾತ್ರಗಳ ಬಗ್ಗೆ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಿದರು.

ಶಿಕ್ಷಕರು ಸಂವಹನ ಕಲೆಯನ್ನು ಹೇಗೆ ಅಭಿವೃದ್ಧಿಗೊಳಿಸಬಹುದೆಂದು ಪ್ರೊ. ಚಂದ್ರಕಲಾರವರು ವಿವರಿಸಿದರು. ಇನ್ನೊರ್ವ ಶಿಕ್ಷಕಿ ಶ್ರೀಮತಿ ದಿವ್ಯಾ ಕೋಟ್ಯನ್‌ರವರು ಫೋನಿಕ್ಸ್ ಬಗ್ಗೆ ತಿಳಿ ಹೇಳಿದರು. ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಸಂಕ್ಷಿಪ್ತವಾಗಿ ಕಾರ್ಯಗಾರದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಐಸಿರಿ ಪರ್ಕಳದ ಅಧ್ಯಕ್ಷ ರೊ. ಸುನೀಲ್ ಕುಮಾರ್‌ರವರು ಅತಿಥಿಗಳನ್ನು ಹಾಗೂ ಶಿಕ್ಷಕರನ್ನು ಸ್ವಾಗತಿಸಿದರು. ವೃತ್ತಿ ಸೇವಾ ನಿರ್ದೇಶಕಾದ ರೊ. ಮಂಜುನಾಥ ಉಪಾಧ್ಯರವರು ಮಾತಾನಾಡಿ ಉತ್ತಮ ಪ್ರಜೆಗಳಾಗುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಕರೆ ನೀಡಿದರು. ಕಾರ್ಯದರ್ಶಿಯಾದ ರೊ. ಪಾಂಡುರಂಗ ಲಾಗ್ವಂಕರ್ ವಂದಾನರ್ಪಣೆಗೈದರು.













