ಪೆರ್ಡೂರು: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮಾ.12 ರಿಂದ ಮಾ.19ರ ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.13ರಂದು (ನಾಳೆ) ಸಂಜೆ 5 ಗಂಟೆಗೆ ದೇವಸ್ಥಾನದ ನೂತನ ವೆಬ್ ಸೈಟ್ ಅನಾವರಣಗೊಳ್ಳಲಿದೆ. ನೂತನ ವೆಬ್ ಸೈಟ್ ಉದ್ಘಾಟನೆಯನ್ನು ಡಾ.ಎಚ್.ಎಸ್. ಬಲ್ಲಾಳ್ ಸಹಕುಲಾಧಿಪತಿಗಳು, ಮಾಹೆ ಮಣಿಪಾಲ ನಡೆಸಲಿದ್ದಾರೆ.
ಶ್ರೀದೇವಳದ ನೂತನ ಸ್ವಾಗತ ಸಮಿತಿಯ ಉದ್ಘಾಟನೆ ಹಾಗೂ ರಥಬೀದಿಯಲ್ಲಿ ಅಳವಡಿಸಿದ ನೂತನ ದೀಪಗಳ ಉದ್ಘಾಟನೆ ನಡೆಯಲಿದೆ.
ಸಂಜೆ 7 ರಿಂದ ಚಾಣಕ್ಯ ಮೆಲೋಡಿಸ್ ಹೆಬ್ರಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಚಿತ್ರ: ಪ್ರಸನ್ನ ಪೆರ್ಡೂರು












