ಪೆರ್ಡೂರು: ಪಿ.ಎಂ. ವಿಶ್ವಕರ್ಮ ಯೋಜನೆ, ತರಬೇತಿ ಕಾರ್ಯಗಾರ, ಪ್ರಮಾಣ ಪತ್ರ ವಿತರಣೆ.

ಹೆಬ್ರಿ: ಆಧುನಿಕತೆಗೆ ತಕ್ಕಂತೆ ನಾವು ಮಾಡುವ ಕೆಲಸದಲ್ಲಿ ಪರಿಣತಿಯನ್ನು ಕಾಣಬೇಕಾದರೆ ನೂತನ ತಂತ್ರಜ್ಞಾನದ ತರಬೇತಿ ಅಗತ್ಯ. ಈ ನಿಟ್ಟಿನಲ್ಲಿ ಪೆರ್ಡೂರಿನ ಶಾರದಾಂಬ ಸಂಸ್ಥೆ ಸರಕಾರದ ಉಚಿತ ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯ ಶ್ಲಾಘನೀಯ ಎಂದು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ಇದರ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಪೆರ್ಡೂರು ಶಾರದಾಂಭ ಇನ್ಫೋಟೆಕ್ ನಲ್ಲಿ ನಡೆದ ಉಚಿತ ಕೌಶಲ್ಯ ತರಬೇತಿ ಕಾರ್ಯಗಾರದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಉಚಿತ ಕಿಟ್ ಜೊತೆಗೆ ಸಾಲ ಸೌಲಭ್ಯ:
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾರದಂಬ ಇನ್ಫೋಟೆಕ್ನ ಆಡಳಿತ ನಿರ್ದೇಶಕ ರಂಜಿತ್ ಪ್ರಭು ಮಾತನಾಡಿ ಉಡುಪಿ ಜಿಲ್ಲೆಯ ಸುಮಾರು 75 ಜನರು ಈ ಉಚಿತ ಕೌಶಲ್ಯ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರದ ಜೊತೆ ಪ್ರತಿದಿನ 500 ರಂತೆ ತರಬೇತಿ ಭತ್ಯೆ ಹಾಗೂ 15 ಸಾವಿರ ಮೊತ್ತದ ಟೂಲ್ ಕಿಟ್ ಮತ್ತು ಅಗತ್ಯ ಇರುವವರಿಗೆ ಒಂದು ಲಕ್ಷ ರೂಪಾಯಿಯ ಸಾಲವನ್ನು ಸರಕಾರದ ಯೋಜನೆ ಅಡಿಯಲ್ಲಿ ನೀಡಲಾಗುವುದು ಎಂದರು.
ರಾಜಪುರ ಸರಸ್ವತ ಸಹಕಾರಿ ಸಂಘದ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮಾತನಾಡಿ ವೃತ್ತಿ ನೈಪುಣ್ಯತೆಯನ್ನು ಪಡೆಯಬೇಕಾದರೆ ಇಂತಹ ತರಬೇತಿಗಳು ಅನಿವಾರ್ಯ ಎಂದರು.

ಸಿಎಸ್‌ಸಿಯ ಜಿಲ್ಲಾ ವ್ಯವಸ್ಥಾಪಕ ಮಹೇಶ್ ಕೊಟ್ಟಾರಿ ಮಾತನಾಡಿ ಸರಕಾರದಿಂದ ಸಿಗುವ ಸಾಲ ಸೌಲಭ್ಯ ಮತ್ತು ತರಬೇತಿಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಾರದಂಬ ಇನ್ಫೋಟೆಕ್ನ ಸಂಚಾಲಕಿ ಆಶಾ ಆರ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.ಸುದೇಶ್ ಸ್ವಾಗತಿಸಿ, ನೇತ್ರಾವತಿ ಕಾರ್ಯಕ್ರಮ ನಿರೂಪಿಸಿ, ಪ್ರಣತಿ ವಂದಿಸಿದರು.