ಪೆರ್ಡೂರು: ಕಾರ್ಯಕ್ರಮದಲ್ಲಿ ಕರ್ಕಶವಾದ ಡಿ.ಜೆ.ಸೌಂಡ್ಸ್ ಅಳವಡಿಕೆ – ಪ್ರಕರಣ‌ ದಾಖಲು.

ಪೆರ್ಡೂರು: ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪ ಮನೆಯೊಂದರ ಮೆಹಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾಗಿ ಡಿ ಜೆ ಸೌಂಡ್ಸ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾದ ಹಿನ್ನೆಲೆ ಹಿರಿಯಡ್ಕ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ನಾಗೇಂದ್ರ ನಾಯ್ಕ ಅವರ ಮನೆಗೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡು ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಡಿ.23 ರಂದು 10:30 ಗಂಟೆಯ ತಡರಾತ್ರಿ ಪೆರ್ಡೂರು ಗ್ರಾಮದ ಬಾಳೆಬೈಲು ಶಾಲೆ ಬಳಿ ನಾಗೇಂದ್ರ ನಾಯ್ಕರವರ ಮನೆಯಲ್ಲಿ ಅವರ ಮಗನ ಮೆಹಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾದ ಡಿ ಜೆ ಸೌಂಡ್ಸ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಆದ ಬಗ್ಗೆ ಕರೆ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ನಾಗೇಂದ್ರ ನಾಯ್ಕರವರು ಯಾವುದೇ ಪರವಾನಗಿ ಪಡೆಯದೇ ಕರ್ಕಶವಾದ ಡಿಜೆ ಸೌಂಡ್ಸ್ ಉಪಯೋಗಿಸಿ ಸಾರ್ವಜನಿಕರಿಗೆ ತೊಂದರೆ ಆದ ಬಗ್ಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಆರೋಪಿತರಾದ ನಾಗೇಂದ್ರ ನಾಯ್ಕ (52) ಎಂಬುವವರು ಯಾವುದೇ ಪೂರ್ವಾನುಮತಿ ಅಥವಾ ಪರವಾನಿಗೆಯನ್ನು ಪಡೆಯದೇ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಉಪಯೋಗಿಸಿದ ಡಿ.ಜೆ./ಧ್ವನಿವರ್ಧಕದಗಳಾದ ಕಪ್ಪು ಬಣ್ಣದ ಸೌಂಡ್‌ ಬಾಕ್ಸ್‌ ದೊಡ್ಡದು-4 (3 ಅಡಿ ಎತ್ತರ) ಅಂದಾಜು ಮೌಲ್ಯ 28,000 ರೂ ಹಾಗೂ ಕಪ್ಪು ಬಣ್ಣದ ಸೌಂಡ್‌ ಬಾಕ್ಸ್‌ ಸಣ್ಣದು -2 (1 ಅಡಿ ಎತ್ತರ) ಅಂದಾಜು ಮೌಲ್ಯ 12.000ರೂ ಹಾಗೂ Unisound Amp-1 (ಎಂಪ್ಲಿ ಪ್ಲೇಯರ್‌) (18.000ರೂ) ಆಗಿದ್ದು ಸ್ವಾಧಿನಪಡಿಸಿಕೊಂಡ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 58.000ರೂ ಆಗಿದ್ದು, ಕೃಷ್ಣರಾಜ್ ರವರು ಯಾವುದೇ ಪರವಾನಿಗೆಯಿಲ್ಲದೇ ಧ್ವನಿವರ್ಧಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿ ತಡರಾತ್ರಿಯವರೆಗೂ ಬಳಸಿದ್ದರಿಂದ ಸ್ವೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಆರೋಪಿಗಳಾದ ನಾಗೇಂದ್ರ ನಾಯ್ಕ‌ ಮತ್ತು ಕೃಷ್ಣರಾಜರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.