ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮಗಳನ್ನೇ ಕೊಲೆ ಮಾಡಿದ ತಾಯಿ

ಬೆಂಗಳೂರು: ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ತಾಯಿ ಮೇಲೆ ಮಗಳು ಕೂಡ ಚಾಕುವಿನಿಂದ ದಾಳಿ ಮಾಡಿದ್ದು, ಗಾಯಗೊಂಡ ತಾಯಿ ಆಸ್ಪತ್ರೆ ಪಾಲಾಗಿದ್ದಾರೆ.

ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮಗಳ ನಡುವೆ ಜಗಳ ನಡೆದಿದೆ. ಎಕ್ಸಾಂಗೆ ಕಾಲೇಜಿಗೆ ಹೋಗ್ತೀನಿ ಎಂದು ಮನೆಯಿಂದ ಹೊರಡುತ್ತಿದ್ದ ಮಗಳು ಪರೀಕ್ಷೆಗೆ ಗೈರು ಹಾಜರಾಗಿದ್ದ ವಿಚಾರ ಸೋಮವಾರ ತಾಯಿಗೆ ತಿಳಿದಿದ್ದು, ಜಗಳ ಶುರು ಆಗಿತ್ತು.

ಜಗಳ ಅತಿರೇಕಕ್ಕೆ ಹೋದಾಗ ಚಾಕುವಿನಿಂದ ಇಬ್ಬರು ಪರಸ್ಪರ ಇರಿದುಕೊಂಡಿದ್ದಾರೆ. ತೀವ್ರವಾಗಿ ರಕ್ತಸ್ರಾವ ಆಗಿದ್ರಿಂದ 18 ವರ್ಷದ ಮಗಳು ಸಾಹಿತಿ ಸಾವನ್ನಪ್ಪಿದ್ದಾಳೆ. ತಾಯಿಗೂ ಕೂಡ ತೀವ್ರ ರಕ್ತಸಾವ್ರದಿಂದ ತಾಯಿ ಆಸ್ಪತ್ರೆ ಸೇರಿದ್ದಾರೆ.