ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ

ಕಾರ್ಕಳ: ದಕ್ಷಿಣ ಆಫ್ರಿಕಾದ ಪೊಟ್‌ಚೆಫ್ಸ್‌ಟ್ರೂಮ್‌ ನಲ್ಲಿ ನಡೆದ ಏಷ್ಯಾ- ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಚಾಂಪಿಯನ್‌ಶಿಪ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಕ್ಷತಾ ಪೂಜಾರಿ ಬೋಳ ಅವರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಸೀನಿಯರ್ಸ್ ಸ್ಪರ್ಧಿಸಿದ್ದ ಅಕ್ಷತಾ ಪೂಜಾರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದವರು.

ಸೀನಿಯರ್ಸ್ ವಿಭಾಗದ 52 ಕೆಜಿ ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಈ ಸಾಧನೆ ಮಾಡಿದ್ದಾರೆ.

ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಹಲವು ಸಾಧನೆ ಮಾಡಿರುವ ಅಕ್ಷತಾ ಪೂಜಾರಿ ಬೋಳ ಅವರು ಹಲವಾರು ಚಿನ್ನದ ಪದಕ ಗೆದ್ದವರು. ಏಷ್ಯಾ ಮಟ್ಟ, ಕಾಮನ್ ವೆಲ್ತ್ ಕೂಟ ಮತ್ತು ವಿಶ್ವಮಟ್ಟದಲ್ಲಿ ಹಲವಾರು ಚಿನ್ನದ ಪದಕ ಜಯಿಸಿರುವ ಅಕ್ಷತಾ ಅವರು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.