ಪವರ್ ಪರ್ಬ 2025 ಸಮಾರೋಪ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ’ಪವರ್ ಸ್ಟಾರ್’ ಬಿರುದು

ಉಡುಪಿ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ ಫ್ಲ್ಯಾಟ್‌ ಫಾರಂ ಆಫ್ ವುಮೆನ್ ಎಂಟರ್‌ಪ್ರೆನ್ಯೂರ್‌) ಆಶ್ರಯದಲ್ಲಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ‘ಪವರ್ ಪರ್ಬ 2025’ರ ಸಮಾರೋಪವು ರವಿವಾರ ನಡೆಯಿತು.

ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಾದ ಮಿನುಷಾ ಗೋಪಾಲ್, ಕಾಂಚನ್, ಚೈತ್ರಾ ಬಿ.ಶೆಟ್ಟಿ ವಿದುಷಿ ಮಾನಸಿ ಸುಧೀರ್, ಸುಲತಾ ಕಾಮತ್, ಎ.ಲಕ್ಷ್ಮೀಬಾಯಿ, ಡಾ| ಗೌರಿ ಎಚ್. ಜೆ., ಡಾ| ಶ್ರುತಿ ಬಲ್ಲಾಳ್ ಅವರನ್ನು ‘ಪವರ್ ಸ್ಟಾರ್’ ಬಿರುದಿನೊಂದಿಗೆ
ಸಮ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಹರೀಶ್ ಶೆಟ್ಟಿ ಬ್ಯಾಂಕ್ ಆಫ್ ಬರೋಡಾದ ಡೆಪ್ಯುಟಿ ರೀಜನಲ್ ಮ್ಯಾನೇಜರ್ ವಿದ್ಯಾಧರ ಶೆಟ್ಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಘಟನ ಸಂಯೋಜಕಿ ಸುಗುಣಾ ಸುವರ್ಣ, ಕಾರ್ಯದರ್ಶಿ ಪ್ರಿಯಾ ಕಾಮತ್, ಕೋಶಾಧಿಕಾರಿ, ಪುಷ್ಪಾ ಜಿ.ರಾವ್, ನೋಂದಣಿ ಸಂಯೋಜಕಿ ಸುಪ್ರಿಯಾ ಕಾಮತ್, ಸುಜಯಾ ಶೆಟ್ಟಿ ರೇಷ್ಮಾ ತೋಟ, ನಿಮಿತಾ ಸತೀಶ್ ಚಂದ್ರ, ಜೆನಿಫರ್ ಸಪ್ನಾ ಸಾಲಿನ್ಸ್ ಉಪಸ್ಥಿತರಿದ್ದರು.

ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ಸ್ವಾಗತಿಸಿದರು.ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್ ಹಾಗೂ ಪೂರ್ಣಿಮಾ ಶೆಟ್ಟಿ ನಿರೂಪಿಸಿದರು. ಶ್ರುತಿ ಶಣೈ ವಂದಿಸಿದರು.