ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವ ಸಂಪನ್ನ

ಉಡುಪಿ: ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನ ಪರ್ಕಳ ಮಹಿಷಮರ್ದಿನಿ ಅಮ್ಮನವರ ಸನ್ನಿಧಿಯಲ್ಲಿ ವಾರ್ಷಿಕ ರಥೋತ್ಸವ ಮಾ.25 ರಂದು ಜರಗಿತು.

ಅನ್ನ ಸಂತರ್ಪಣೆ, ಭಜನೆ, ಸ್ಯಾಕ್ಸೋಫೋನ್ ವಾದನ, ರಾತ್ರಿ ಶ್ರೀ ಮನ್ಮಹಾರಥೋತ್ಸವ, ಹಚ್ಚಡ ಸೇವೆ, ಚಂಡೆವಾದನ ನಡೆಯಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಿ. ರಾಮದಾಸ ಹೆಗ್ಡೆ ಸಂಚಾಲಕರಾದ ದಿಲೀಪ್ ರಾಜ್ ಹೆಗ್ಡೆ, ಮಹೇಶ ಠಾಕೂರ್, ಅಧ್ಯಕ್ಷ ಬಿ. ಜಯರಾಜ ಹೆಗ್ಡೆ, ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ಸುಮಿತ್ರಾ ಆರ್. ನಾಯಕ್, ಸಹಾಯಕ ಕೋಶಾಧಿಕಾರಿ ರವೀಂದ್ರ ಪ್ರಭು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಶ್ರೀನಿವಾಸ ಉಪಾಧ್ಯ, ಸದಸ್ಯರಾದ ಮುರುಳಿಧರ ನಕ್ಷತ್ರಿ, ಸುಖಾನಂದ ಶೆಟ್ಟಿಗಾರ, ಸತೀಶ್ ನಾಯ್ಕ, ಸುಗುಣ ನಾಯ್ಕ, ಕೀರ್ತಿ ಕುಮಾರ್, ಅಕ್ಷಯ ಬಂಗೇರ, ಸತ್ಯಭಾಮ ಆಚಾರ್ಯ, ಹಾಗೂ ದೇವಸ್ಥಾನದ ಅರ್ಚಕ ವೃಂದ, ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.