ಉಡುಪಿ: ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಪರಿಣಾಮ ಎಕ್ಸ್ ಪ್ರೆಸ್ ಬಸ್ ವೊಂದು ಹೆದ್ದಾರಿ ಪಕ್ಕದ ತೆಂಗಿನ ತೋಟಕ್ಕಿಳಿದು ನಿಂತ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯ ತೆಂಕ ಎರ್ಮಾಳ್ ಮಸೀದಿ ಬಳಿ ಸಂಭವಿಸಿದೆ.
ಉಡುಪಿ ಕಡೆಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್ ಚಾಲಕ ಶಂಭು ಎಂಬುವವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಹಾಗೂ ಪ್ರಯಾಣಿಕರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಷಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ.














