ಉಡುಪಿ: ಪಡುಬಿದ್ರಿ ಪೇಟೆಯ ಹಣ್ಣು ಹಂಪಲು ಅಂಗಡಿಯೊಂದರಲ್ಲಿ ಖರೀದಿಸಿದ ಕಾಲಿಪ್ಲವರ್ ನಲ್ಲಿ ಹೆಬ್ಬಾವಿನ ಮರಿಯೊಂದು ಪತ್ತೆಯಾಗಿದೆ.
ಪಡುಬಿದ್ರಿ ಬೇಂಗ್ರೆಯ ಮಹಿಳೆಯೊರ್ವರು ಪಡುಬಿದ್ರಿ ಮುಖ್ಯ ಪೇಟೆಯ ಹಣ್ಣು ಹಂಪಲು ಅಂಗಡಿಯಲ್ಲಿ ಕಾಲಿಪ್ಲವರ್ ಖರೀದಿಸಿ ಮನೆಗೆ ಹೋದವರೇ ನೇರವಾಗಿ ಅದನ್ನು ಪ್ರಿಡ್ಜ್ ನಲ್ಲಿ ಇರಿಸಿದ್ದರು, ಮರುದಿನ ಅದನ್ನು ಊಪಯೋಗಿಸುವುದಕ್ಕಾಗಿ ಪ್ರಿಡ್ಜ್ ನಿಂದ ಹೊರ ತೆಗೆದು ಕತ್ತರಿಸಲು ಮುಂದಾದಾಗ ಆ ಮಹಿಳೆಗೆ ಆತಂಕ ಕಾದಿತ್ತು, ಕಾಲಿಪ್ಲವರ್ ಒಳಭಾಗದಿಂದ ಹೆಬ್ಬಾವಿನ ಮರಿಯೊಂದು ಹೊರ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಿದ್ದು, ಮಹಿಳೆ ಗಾಬರಿಗೊಂಡು ಮನೆಮಂದಿಗೆ ತಿಳಿಸಿದ್ದಾರೆ. ಹೆಬ್ಬಾವಿನಂತೆ ಇದರಲ್ಲಿ ವಿಷಜಂತುಗಳು ಆಶ್ರಯ ಪಡೆದು, ಖರೀದಿ ಮಾಡಿದವರು ಮನೆಯ ಕೋಣೆಯೊಳಗಿಟ್ಟು, ಬಳಿಕ ಅದರಿಂದ ಹೊರ ಬರುವ ವಿಷಜಂತುಗಳು ದಾಳಿ ನಡೆಸಿದರೂ ಆಶ್ಚರ್ಯವಿಲ್ಲ. ಈ ಬಗ್ಗೆ ಸಾರ್ವಜನಿಕರು ಇಂಥವುಗಳನ್ನ ಖರೀದಿ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ.