ಪಡುಬಿದ್ರಿ: ಕಾರು ಢಿಕ್ಕಿಯಾಗಿ ಪಾದಚಾರಿ ಮೃತ್ಯು.

ಪಡುಬಿದ್ರಿ: ಕಾರು ಡಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಪಡುಬಿದ್ರೆಯ ಬಡ ಎರ್ಮಾಳು ಹತ್ತಿರ ನಡೆದಿದೆ.

ಬಡಾ ಎರ್ಮಾಳು ಕಲ್ಯಾಣಿ ಬಾರ್ ಎದುರಿನ ರಿಕ್ಷಾ ನಿಲ್ದಾಣದತ್ತ ರವಿವಾರ ಸಂಜೆ ವೇಳೆ ನಡೆದು ಬರುತ್ತಿದ್ದ ಬಡಾ ಗ್ರಾಮದ ನಿವಾಸಿ ರಮೇಶ್(66) ಅವರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಕಾರೊಂದು ಢಿಕ್ಕಿಯಾಗಿ ತಲೆಗೆ ತೀವ್ರ ಗಾಯಗೊಂಡವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೇ.26 ರಾತ್ರಿ ಮೃತಪಟ್ಟಿದ್ದಾರೆ.

ಚಾಲಕನ ಅತೀ ವೇಗ ಹಾಗೂ ಅಜಾಗ್ರತೆಯ ಚಾಲನೆಯೇ ಈ ಘಟನೆಗೆ ಕಾರಣವಾಗಿದ್ದು, ಆತನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.