ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ಶ್ರೀನಾಗದೇವರ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶ ಸಂಪನ್ನ

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಸಮೀಪ ಸೀತಾ ನದಿಯ ತಟದಲ್ಲಿರುವ ಪಂಚಮೀಕಾನು ನಾಗಸನ್ನಿಯಲ್ಲಿ ಗುರುವಾರ ಶ್ರೀನಾಗದೇವರ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶ ಶ್ರದ್ಧಾಭಕ್ತಿಯಿಂದ ನಡೆಯಿತು.

ಶ್ರೀ ನಾಗದೇವರಿಗೆ ಬ್ರಹ್ಮಕಲಾಭಿಷೇಕ, ಮಹಾಪೂಜೆ ಹಾಗೂ ನಾಗಪಾತ್ರಿ ವೈ. ಲಕ್ಷ್ಮೀನಾರಾಯಣ ಮಧ್ಯಸ್ಥ ಅವರಿಂದ ನಾಗದೇವರ ಸಂದರ್ಶನ ನಡೆಯಿತು. ನಂತರ ಪಲ್ಲಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಜರಗಿತು.

ಅರ್ಚಕರಾದ ಚಂದ್ರಶೇಖರ ಅಡಿಗ, ಕೃಷ್ಣ ಅಡಿಗ, ರಾಘವೇಂದ್ರ ಅಡಿಗರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರಘುರಾಮ, ಮಧ್ಯಸ್ಥ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಅನೂಪ್ ಕುಮಾರ್ ಶೆಟ್ಟಿ, ಹೇಮಾ.ವಿ.ಬಾಸ್ರಿ, ತಮ್ಮಯ್ಯ ನಾಯ್ಕ ರುದ್ರ ದೇವಾಡಿಗ, ಜಯಂತಿ ಮೆಂಡನ್, ಸಿಬಂದಿ, ಚಾಕರಿ ವರ್ಗದವರು ಮತ್ತು ಊರ ಪರವೂರ ಭಕ್ತರು ಉಪಸ್ಥಿತರಿದ್ದರು.