ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ನಾಗಮಂಡಲ ಹೊರೆಕಾಣಿಕೆ ಸಮರ್ಪಣೆ.

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.13ರಿಂದ 19ರ ತನಕ ನಡೆಯಲಿರುವ ಸಮಗ್ರ ಜೀರ್ಣೋದ್ಧಾರಾಂಗ ಪುನಃ ಪ್ರತಿಷ್ಠಾಪನಾ ಮಹೋತ್ಸವ, ನಾಗಮಂಡಲ ಪ್ರಯುಕ್ತ ರವಿವಾರ ಹೊರೆಕಾಣಿಕೆ ಸಮರ್ಪಣೆ ಭವ್ಯ ಮೆರವಣಿಗೆಯಿಂದ ಜರಗಿತು.

ಕುಂಜಾಲಿನ ನೀಲಾವರ ಕ್ರಾಸ್ ನಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಅನೂಪ್ ಕುಮಾರ್ ಶೆಟ್ಟಿ, ಹೇಮ ವಿ. ಬಾಬ್ರಿ, ಕೆ. ತಮ್ಮಯ್ಯ ನಾಯ್ಕ್, ರುದ್ರ ದೇವಾಡಿಗ, ಜಯಂತಿ ಮೆಂಡನ್, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ನೀಲಾವರ ಮೇಳದ ರಮೇಶ್ ಪೂಜಾರಿ, ಸ್ಥಳೀಯ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂತೋಷ್ ಕುಮಾರ್ ಶೆಟ್ಟಿ ಎಳ್ಳಂಪಳ್ಳಿ ನಿರೂಪಿಸಿದರು. ಎ.16 ರಂದು ನಾನಾ ಧಾರ್ಮಿಕ ಕಾರ್ಯಕ್ರಮ, 17ರಂದು ವಿವಿಧ ಹೋಮ, ಆಶ್ಲೇಷಾ ಬಲಿ, 18ರಂದು ಬೆಳಿಗ್ಗೆ ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಹಾಲಿಟ್ಟು ಸೇವೆ, ರಾತ್ರಿ ಅಷ್ಟ ಪವಿತ್ರ ನಾಗಮಂಡಲೋತ್ಸವ ಜರಗಲಿದೆ.

ಪ್ರತಿನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.