ನೀಟ್ 2024 ರ ಫಲಿತಾಂಶ: ಜ್ಙಾನಸುಧಾದ ಕ್ರಿಷ್ ಕಡಲ್ಗಿಕರ್ ಗೆ 700 ಅಂಕ.

ಕಾರ್ಕಳ: NTA ನಡೆಸಿದ ರಾಷ್ಟ್ರಮಟ್ಟದ ನೀಟ್ 2024 ರ ಪರೀಕ್ಷಾ ಫಲಿತಾಂಶದಲ್ಲಿ ಜ್ಙಾನಸುಧಾದ ಕ್ರಿಷ್ ಕಡಲ್ಗಿಕರ್ 720 ರಲ್ಲಿ 700 ಅಂಕ ಗಳಿಸಿ ರಾಷ್ಟ್ರ ಮಟ್ಟದಲ್ಲಿ 1880 ರ‍್ಯಾಂಕ್ ಗಳಿಸಿ ಅಮೋಘ ಸಾಧನೆ ಮಾಡಿರುತ್ತಾರೆ.

ಅಲ್ಲದೆ ಇದೇ ಸಂಸ್ಥೆಯ ವಿದ್ಯಾರ್ಥಿ ತನ್ಮಯ್ ಶೆಟ್ಟಿ 690 ಅಂಕ, ಆರ್ಯ ಎಮ್ ಹಾಗೂ ಗಜೇಂದ್ರ ಅವರು 680 ಅಂಕ, ರೋಶ್ನಿ 677 ಸ್ವಸ್ತಿಕ್ 675, ಕ್ಷೀರಜ್ ಎಸ್ ಆಚಾರ್ಯ 675 ಅಂಕ ಗಳಿಸಿರುತ್ತಾರೆ.

ಒಟ್ಟು 94 ವಿದ್ಯಾರ್ಥಿಗಳು 600 ಕ್ಕಿಂತ ಅಧಿಕ ಅಂಕ ಗಳಿಸಿ ಉನ್ನತ ಸಾಧನೆ ಮಾಡಿರುತ್ತಾರೆ.