ನಾಪತ್ತೆಯಾದ ಹಿಂದೂ ಯುವತಿ ಮುಸ್ಲಿಂ ಯುವಕನ ಜೊತೆ ರಿಜಿಸ್ಟ್ರಾರ್ ಮ್ಯಾರೇಜ್..!

ಕಾಸರಗೋಡು: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಸರಗೋಡು ಶಾಲೆಯ ಹಿಂದೂ ಶಿಕ್ಷಕಿಯೊಬ್ಬರು ಮುಸ್ಲಿಂ ಯುವಕನ ಜೊತೆ ಪತ್ತೆಯಾಗಿದ್ದು, ಇದು ಲವ್ ಜಿಹಾದ್ ಎಂಬ ಆರೋಪ ಕೇಳಿ ಬಂದಿದೆ.

ಮೇ.23 ರಂದು ಮನೆಯಿಂದ ಹೊರಟಿದ್ದ ಶಿಕ್ಷಕಿ ಯುವತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ಯುವತಿಯ ತಂದೆ ದೂರು ದಾಖಲಿಸಿದ್ದರು.

ಇದೀಗ ಯುವತಿ ಮುಸ್ಲಿಂ ಯುವಕನ ಜೊತೆ ಪತ್ತೆಯಾಗಿದ್ದು, ಇಬ್ಬರೂ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ. ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರ ಭಾವಚಿತ್ರವಿರುವ ನೋಟಿಸ್ ಪತ್ತೆಯಾಗಿದ್ದು, ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿ ಮೇ.27 ರಂದು ಬದಿಯಡ್ಕ ಪೊಲೀಸ್ ಠಾಣೆಗೆ ಬಂದು ಜೋಡಿ ಹಾಜರಾಗಿದೆ.

ಲವ್ ಜಿಹಾದ್ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ:

ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಲವ್ ಜಿಹಾದ್ ಗೆ ಕೇರಳದ ಮುಸ್ಲಿಂ ಲೀಗ್ ನೇತಾರನೊಬ್ಬನ ತಂತ್ರ ಅಡಗಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿವೆ.