ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ (ಫೆ.01) ಲೋಕಸಭೆಯಲ್ಲಿ 2025-26ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲಾ ವಸ್ತುಗಳು ಅಗ್ಗ ಮತ್ತು ಯಾವ ವಸ್ತುಗಳು ದುಬಾರಿಯಾಗಿದೆ ಎಂಬ ವಿವರ ಇಲ್ಲಿದೆ..
ಈ ವಸ್ತುಗಳು ಅಗ್ಗ:
ಮೊಬೈಲ್ ಫೋನ್, 36 ವಿಧದ ಕ್ಯಾನ್ಸರ್ ಔಷಧ, ಇ.ವಿ.ಬ್ಯಾಟರಿಗಳು, ಶೀತಲೀಕರಣ ಮೀನಿನ ಪೇಸ್ಟ್, ವೆಟ್ ಬ್ಲೂ ಲೆದರ್, ವಾಹಕ ದರ್ಜೆಯ ಈಥರ್ನೆಟ್ ಸ್ವಿಚ್ ಗಳು, ಖನಿಜಗಳು, ಎಲ್ ಸಿಡಿ/ಎಲ್ ಇಡಿ ಟಿವಿಗಳು, ಹಡಗು ನಿರ್ಮಾಣದ ಕಚ್ಚಾ ವಸ್ತುಗಳು, ಸಮುದ್ರ ಉತ್ಪನ್ನಗಳು, ಕೋಬಾಲ್ಟ್ ಉತ್ಪನ್ನಗಳು, ಎಲ್ ಇಡಿ, ಲಿಥಿಯಂ ಐಯಾನ್ ಬ್ಯಾಟರಿ, ಜಿಂಕ್, ಲ್ಯಾಪ್ ಟಾಪ್, ಸ್ಮಾರ್ಟ್ ಟಿವಿ, ಗ್ಯಾಜೆಟ್ಸ್.
ಈ ವಸ್ತುಗಳು ದುಬಾರಿ:
ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ, ನೇಯ್ಗೆಯ ಬಟ್ಟೆಗಳು, ಐಶಾರಾಮಿ ಸರಕುಗಳು, ಆಲ್ಕೋಹಾಲ್, ತಂಬಾಕು, ಅನಗತ್ಯ ಆಮದು ವಸ್ತುಗಳು, ಟೆಲಿಕಾಂ ಉಪಕರಣ, ಸಿಗರೇಟ್, ಚಿನ್ನ, ಬೆಳ್ಳಿ ಆಮದು ಸುಂಕ ಏರಿಕೆ, ವಿಮಾನ ಇಂಧನ, ವಿಮಾನ ಟಿಕೆಟ್ ದರ.