ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಬಡಗಬೆಟ್ಟುವಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ ಉಡುಪಿ ತಾಲ್ಲೂಕು ಮಣಿಪಾಲ ವಲಯದ ಬಡ ಗಬೆಟ್ಟು ಸರಕಾರಿ ಸಂಯುಕ್ತ ಪ್ರೌಢ ಶಾಲೆ ಶೆಟ್ಟಿ ಬೆಟ್ಟು ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ ಭಾಗವಹಿಸಿ ಮಾತನಾಡಿ, ಯುವಜನತೆ ದಾರಿ ತಪ್ಪ ಬಾರದು, ಟಿವಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕು, ಶಾಲೆ ಮತ್ತು ತಂದೆ ತಾಯಿಗೆ ಕೀರ್ತಿ ಗೌರವ ತರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಜನಜಾಗೃತಿ ಅಧ್ಯಕ್ಷರಾದ ಸತ್ಯನಂದ ನಾಯಕ್ ಅವರು, ಕಾರ್ಯಕ್ರಮದ ಉದ್ದೇಶ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ನಾಯಕ್ ಉಪಸ್ಥಿತರಿದ್ದರು, ವಲಯ ಮೇಲ್ವಿಚಾರಕಾರದ ಬಾಲಚಂದ್ರ ನೀರಿನ ಮಹತ್ವ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡಿದರು, ಶಾಲೆಯ ಶಿಕ್ಷಕರು ಸೇವಾಪ್ರತಿನಿಧಿ ಶುಭವತಿ ಉಪಸ್ಥಿತರಿದ್ದರು.