ಉಡುಪಿ: ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳ್ತಂಗಡಿ ಇದರ ಉಡುಪಿ ತಾಲೂಕು ವತಿಯಿಂದ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ ಇಂದು ರಾಜೀವನಗರ ಸರಕಾರಿ ಶಾಲೆಗೆ ಸುಮಾರು ರೂಪಾಯಿ 70,000 ಮೌಲ್ಯದ ಡೆಸ್ಕ್ ಮತ್ತು ಬೆಂಚುಗಳನ್ನು ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ಕೇಶವ ಕೋಟ್ಯಾನ್ ರವರು ವಹಿಸಿದ್ದರು.

ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ತಾಲೂಕು ಜನಜಾಗೃತಿ ಸದಸ್ಯ ಆತ್ರಾಡಿ ಸತ್ಯಾನಂದ ನಾಯಕ್ ಇವರು ಯೋಜನೆ ಹುಟ್ಟುಬಂಧ ದಾರಿ ಮತ್ತು ಆದರ ಚಟುವಟಿಕೆಗಳು, ಜನಜಾಜಾಗ್ರತಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಜ್ಞಾನ ದೀಪ ಕಾರ್ಯಕ್ರಮದಲ್ಲಿ ಕಳೆದವಾರ ಹಿರಿಯಡ್ಕ ಹೈ ಸ್ಕೂಲ್ ಸೇರಿ ತಾಲೂಕಿನ 7 ಸರಕಾರಿ ಶಾಲೆಗಳಿಗೆ ಬೆಂಚ್ ಡೆಸ್ಕ್ ಗ ಳನ್ನು ವಿತರಿಸಲಾಗಿದೆ ಮತ್ತು 70 ಅತಿಥಿ ಶಿಕ್ಷಕಿಯರನ್ನು ನೇಮಕಾತಿ ಮಾಡಲಾಗಿದೆ. ಪ್ರತಿವರ್ಷ 400 ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಲಾಗುತ್ತಿದೆ ಎಂದು ಹೇಳಿದರು.
ಮತ್ತೊರ್ವ ಮುಖ್ಯ ಅತಿಥಿ ಮಣಿಪಾಲ ಪೊಲೀಸ್ ಠಾಣಾ ಅಧಿಕಾರಿ ಅನಿಲ್ ಕುಮಾರ್ ಸರ್ ರವರು ಪೊಲೀಸ್ ಇಲಾಖೆ ಯಿಂದ ದೊರಕುವ ಕಾನೂನು ಸೌಲಭ್ಯ ಗಳು ವಿವಿಧ ಸಹಾಯವಾಣಿ ಮೊಬೈಲ್ ಸಂಖ್ಯೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಇತ್ತೀಚೆಗೆ ನಡೆಯುತ್ತಿರುವ ಸೈಬರ್ ಕ್ರಿಮ್ ಮೋಸದಿಂದ ಹಣ ಕಳೆದು ಕೊಂಡ ಕೆಲ ಉದಾಹರಣೆಗಳನ್ನು ವಿವರಿಸಿ ಜಾಗ್ರತರಾಗಿರುವಂತೆ ತಿಳಿಸಿದರು.

ವೇದಿಕೆಯಲ್ಲಿ ಪ್ರೌಡ ಶಾಲಾ ಶಿಕ್ಷಕ ಸಂಜೀವ ಸರ್ ಮತ್ತು ಮುಖ್ಯ ಉಪಾಧ್ಯಾಯ ಕೃಷ್ಣ ಸರ್, ಪಂಚಾಯತ್ ಸದಸ್ಯೆ ಶ್ರೀಮತಿ ಫ್ಲೋಸಿ ಫೆರ್ನಾಂಡಿಸ್, ಮಣಿಪಾಲ ವಲಯ ಮೇಲ್ವಿಚಾರಕರು ಬಾಲಚಂದ್ರ ಸರ್, ಸೇವಾ ಪ್ರತಿನಿಧಿ ಶ್ರೀಮತಿ ಪ್ರಿಯಾಂಕಾ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಉಪಾಧ್ಯಾಯ ಕೃಷ್ಣ ಸರ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಬಾಲಚಂದ್ರ ಅವರು ಪ್ರಸ್ತಾವಿಕ ಮಾತಾಡಿ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದವನ್ನಿತ್ತರು.

ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಯರು, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು, ಯೋಜನೆಯ ಸದಸ್ಯರು ಹಾಜರಿದ್ದರು.












