ದ್ವಿತೀಯ ಪಿಯುಸಿ ಫಲಿತಾಂಶ: ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ದ್ರಶಿತಾ ಎಚ್ ಪುತ್ರನ್ ಅವರು ರಾಜ್ಯಕ್ಕೆ 9ನೇ ರ್ಯಾಂಕ್

ಕಟಪಾಡಿ: ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದ್ರಶಿತಾ ಎಚ್ ಪುತ್ರನ್ ಅವರು 600ಕ್ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ 9ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

ಇವರು ಉಡುಪಿ ಉದ್ಯಾವರದ ಹರಿಶ್ಚಂದ್ರ ಪುತ್ರನ್ ಮತ್ತು ಗೀತಾ ಎಚ್ ಪುತ್ರನ್ ದಂಪತಿಗಳ ಪುತ್ರಿಯಾಗಿರುತ್ತಾರೆ.