ದೊಡ್ಡಣಗುಡ್ಡೆ: ಮೂರು ದಿನಗಳ “ಫಲಪುಷ್ಪ ಪ್ರದರ್ಶನ”ಕ್ಕೆ ಜಿಲ್ಲಾಧಿಕಾರಿ ಚಾಲನೆ

ಉಡುಪಿ: ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ “ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಇಂದು ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು.
ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು, ಫಲಪುಷ್ಪ ಮೇಳವನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಪರಿಕಲ್ಪನೆಗಳನ್ನು ಪುಷ್ಪಗಳಿಂದಲೇ ಅನಾವರಣಗೊಳಿಸಲಾಗಿದೆ. ವಿವಿಧ ಪ್ರಕಾರದ ಫಲಪುಷ್ಪಗಳಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

Oplus_131072

ಎಸ್ಪಿ ಡಾ. ಅರುಣ್ ಕೆ., ಜಿಪಂ ಸಿಇಓ ಪ್ರತೀಕ್ ಬಾಯಲ್,
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಉಪಸ್ಥಿತರಿದ್ದರು.

Oplus_131072

ಪೆಟೂನಿಯ, ಸೆಲೋಷಿಯಾ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಆಸ್ಟರ್, ಬಾಲ್ಸಮ್, ತೊರೇನಿಯ, ಯುಜೀನಿಯಾ, ಗುಲಾಬಿ, ಟೆಕೋಮಾ, ದಾಸವಾಳ ಮೊದಲಾದ 23 ಜಾತಿಯ 7 ಸಾವಿರ ಹೂವಿನ ಗಿಡಗಳನ್ನು ಆಕರ್ಷಕವಾಗಿ ಜೋಡಿಸಲಾಗಿತ್ತು. ಸುಮಾರು 1.25ಲಕ್ಷ ಸಂಖ್ಯೆಯ ಗುಲಾಬಿ, ಸೇವಂತಿಗೆ, ಆರ್ಕಿಡ್ಸ್, ಲಿಲಿಯಮ್ ಮೊದಲಾದ ಹೂವುಗಳನ್ನು ಬಳಸಿ ತಯಾರಿಸಿರುವ ವಿವಿಧ ಕಲಾಕೃತಿಗಳು ಗಮನ ಸೆಳೆದವು. ವಿವಿಧ ಪುಷ್ಪಗಳನ್ನು ಉಪಯೋಗಿಸಿ ರಚಿಸಿರುವ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪುಷ್ಪ ಕಲಾಕೃತಿ ಕಣ್ಮನ ಸೆಳೆಯುತ್ತಿದೆ.

Oplus_131072

ಬಾಳೆ, ನಂಜನಗೂಡು ರಸಬಾಳೆ, ಕಲ್ಲಂ ಬಾಳೆ, ಕಮಲಾಪುರ ಕೆಂಪು ಬಾಳೆ, ಬೂದು ಬಾಳೆ, ಕರ್ಬಾಳೆ, ಮೈಸೂರು ಬಾಳೆ, ಏಲಕ್ಕಿಿ ಬಾಳೆ, ಪುಟ್ಟ ಬಾಳೆ, ಕೆವಂಡೀಸ್ ಬಾಳೆ, ನೀರು ಬಾಳೆ ಸಹಿತ ವಿವಿಧ ಪ್ರಕಾರದ ಬಾಳೆಹಣ್ಣುಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿದವು.

ಡ್ರ್ಯಾಗನ್ ಫ್ರುುಟ್, ರಾಂಬುಟನ್, ಮಾವಿನಹಣ್ಣು, ಹಲಸು, ಮೊಟಾವ, ಅಭಿಯು, ಸ್ಟಾರ್ ಫ್ರುುಟ್, ಮ್ಯಾಾಂಗೋಸ್ಟಿಿನ್, ವಿಯೆಟ್ನಾಾಂ ಸುಪರ್ಲಿ, ಪೇರಳೆ, ಸುರಿನಮ್ ಚೆರಿ, ಸುವರ್ಣಲೇಖಾ ಮಾವು, ಕಾಲಪತ್ತಿ ಚಿಕ್ಕು, ಲಕ್ಷ್ಮಣ ಫಲ ಸಹಿತ ವಿವಿಧ ಪ್ರಕಾರದ ಗಿಡಗಳನ್ನು ಮಾರಾಟಕ್ಕೆೆ ಇರಿಸಲಾಗಿತ್ತು. ವಿವಿಧ ಬಣ್ಣದ ಕಲ್ಲಂಗಡಿ ಹಣ್ಣುಗಳನ್ನು ಕೆೊಂಡುಕೊಳ್ಳಲು ಗ್ರಾಹಕರು ಮುಗಿಬಿದ್ದರು.