ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮೇಳೈಸಿದೆ. ಇಂದು ಜನ್ಮಾಷ್ಟಮಿಯ ವೈಭವವಾದರೆ ಮಂಗಳವಾರ ಐತಿಹಾಸಿಕ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಉಡುಪಿಯ ಎಲ್ಲೆಡೆ ತಾಸೆ,ಬ್ಯಾಂಡ್ ಪೆಟ್ಟು ಕೇಳಿಬರುತ್ತಿದೆ. ತಾಸೆ ಏಟಿಗೆ ಅಲ್ಲಲ್ಲಿ ಹುಲಿಕುಣಿತ ತಂಡಗಳು ಪ್ರದರ್ಶನ ಮಾಡುತ್ತಿದೆ.

ಉಡುಪಿಯಲ್ಲಿ ಅಷ್ಟಮಿಯ ಸಂಭ್ರಮದಲ್ಲಿ ಹತ್ತಾರು ಹುಲಿವೇಷ ತಂಡಗಳು ಇವೆ. ರಾತ್ರಿ ಊದು ಪೂಜೆಯ ಬಳಿಕ ಬಣ್ಣ ಹಾಕಿಕೊಂಡು ಪ್ರದರ್ಶನ ಮಾಡುತ್ತಿದೆ.ಈ ಬಾರಿ ವಿಶೇಷವಾಗಿ ದುಬೈ ನ ಯುವತಿಯರ ತಂಡ ಹುಲಿವೇಷಕ್ಕಾಗಿ ಉಡುಪಿಗೆ ಆಗಮಿಸಿದೆ.ಅಪ್ಪೆನ ಮೋಕೆದ ಜೋಕುಲು ದುಬೈ ಎಂಬ ತಂಡದೊಂದಿಗೆ ದುಬೈನಲ್ಲಿ ಉದ್ಯೋಗ, ವ್ಯಾಸಾಂಗ ಮಾಡುತ್ತಿರುವ ಹದಿಮೂರು ಮಂದಿ ಯುವತಿಯರ ತಂಡ ಹುಲಿವೇಷಕ್ಕಾಗಿಯೇ ಉಡುಪಿಗೆ ಆಗಮಿಸಿದೆ.

ಹದಿಮೂರು ಮಂದಿ ಯುವತಿಯರ ಪೈಕಿ ಮಂಗಳೂರಿನ ನಿವಾಸಿಗಳೂ ಇದ್ದಾರೆ.ಕೆಲವರು ಉದ್ಯೋಗದಲ್ಲಿದ್ರೆ,ಇನ್ನು ಕೆಲವರು ವ್ಯಾಸಾಂಗ ಮಾಡುತ್ತಿದ್ದಾರೆ.ಇಬ್ಬರು ಪುಟಾಣಿಗಳೂ ತಂಡದಲ್ಲಿ ಭಾಗಿಯಾಗಿದ್ದಾರೆ..ತುಳು ಸಂಸ್ಕೃತಿಯನ್ನು ಆಚರಣೆ ಮಾಡುವ ನಿಟ್ಟಿನ್ನಲ್ಲಿ ತಂಡ ಉಡುಪಿಗೆ ಆಗಮಿಸಿದೆ.ಉಡುಪಿಯ ಹೆಜಮಾಡಿಯಲ್ಲಿ ಊದು ಪೂಜೆಯಲ್ಲಿ ಭಾಗವಹಿಸಿ ಎರಡು ದಿನಗಳ ಕಾಲ ಹುಲಿವೇಷ ಧರಿಸಿ ಹುಲಿಕುಣಿತ ಮಾಡಲಿದೆ.

ತಂಡದಲ್ಲಿ ಜ್ಯೋತಿ, ನಿಕಿತಾ, ಕಾಂಚನಾ,ವೈಷ್ಣವಿ,ವೈಭವಿ,ವರ್ಷಿಣಿ,ಪೂಜಾ,ಸೌಮ್ಯ,ಜ್ಯೋತಿ,ರೇಶ್ಮಾ ಮತ್ತಿತ್ತರು ಇದ್ದಾರೆ.ಈ ಬಗ್ಗೆ ಮಾತನಾಡಿದ ತಂಡ ಜ್ಯೋತಿ, ನಾವು ದುಬೈ ನಿಂದ ಇಲ್ಲಿ ಕಲೆ ಪ್ರದರ್ಶನಕ್ಕಾಗಿ ಬಂದಿದ್ದೇವೆ. ಉಡುಪಿಗೆ ಬರಲು ಹಣ,ಸಮಯ ಖರ್ಚಾಗಿದೆ.ಆದರೆ ಕಲೆಯ ಮೇಲಿನ ಪ್ರೀತಿಯಿಂದ ಉಡುಪಿಗೆ ಆಗಮಿಸಿದ್ದೇವೆ..ಹುಲಿಕುಣಿತಕ್ಕೆ ಸಾಕಷ್ಟು ನಿಯಮಗಳಿವೆ..ಆ ನಿಯಮಗಳನ್ನು ಶಾಸ್ತ್ರ ಬದ್ದವಾಗಿಯೇ ಪಾಲಿಸಿ ವೇಷ ಹಾಕಲಿದ್ದೇವೆ..ಈ ಕಲೆ ಉಳಿಯಬೇಕು..ಮುಂದಿನ ಮಕ್ಕಳೂ ಇದನ್ನು ಬೆಳೆಸಬೇಕು ಎಂದು ಹೇಳಿದ್ದಾರೆ.



ಬೈಟ್-
ಜ್ಯೋತಿ, ದುಬೈ












