ತ್ರಿಶಾ ಕ್ಲಾಸಸ್ : ಸಿ.ಎ ಫೌಂಡೇಶನ್ ಪೂರ್ವಸಿದ್ಧತಾ ಪರೀಕ್ಷೆ ಆರಂಭ

ವಾಣಿಜ್ಯ ವಿಭಾಗದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಜೂನ್ ತಿಂಗಳಲ್ಲಿ ಸಿ.ಎ ಫೌಂಡೇಶನ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ (ಮೋಕ್ ಎಕ್ಸಾಮ್ ) ಪೂರ್ವ ಸಿದ್ಧತಾ ಪರೀಕ್ಷೆಯು ಮೇ 20 ರಿಂದ ಆರಂಭವಾಗಲಿದೆ. ಐ.ಸಿ.ಎ.ಐ ಮಾದರಿಯಲ್ಲಿಯೇ ಪರೀಕ್ಷೆಗಳು ನಡೆಯಲಿದ್ದು ವಿದ್ಯಾರ್ಥಿಗಳಿಗೆ ಸಿ.ಎ ಫೌಂಡೇಶನ್ ಪರೀಕ್ಷೆ ಎದುರಿಸಲು ಸಹಾಯಕವಾಗಲಿದೆ.
ಆಸಕ್ತ ವಿದ್ಯಾರ್ಥಿಗಳು ಉಡುಪಿಯ ಕೋರ್ಟ್ ಮುಂಭಾಗದ ತ್ರಿಶಾ ಕ್ಲಾಸಸ್, ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜನ್ನು ಅಥವಾ ಮಂಗಳೂರಿನ ಅಳಕೆಯಲ್ಲಿರುವ ತ್ರಿಶಾ ಕ್ಲಾಸಸ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.