ತ್ರಿಶಾ ಕ್ಲಾಸಸ್ ಮಂಗಳೂರು : ಸಿಎ ಫೌಂಡೇಶನ್ ಮಾಹಿತಿ ಕಾರ್ಯಾಗಾರ

ಮಂಗಳೂರು : ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ‌ಫೌಂಡೇಶನ್ ವಿದ್ಯಾರ್ಥಿಗಳಿಗೆ ಜುಲೈ 5 ರಂದು ಮಂಗಳೂರಿನ ಶ್ರೀ ರಾಮಾಶ್ರಮ ಪಿಯು ಕಾಲೇಜಿನಲ್ಲಿ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಸಿಎ ಸಂತೋಷ್ ಪ್ರಭು ಅವರು ಸಿಎ ಪರೀಕ್ಷೆ ರಾಷ್ಟ್ರ ಮಟ್ಟದ ಪರೀಕ್ಷೆಯಾಗಿದೆ. ದೇಶ-ವಿದೇಶಗಳಲ್ಲಿಯೂ ಉತ್ತಮ ಉದ್ಯೋಗ ಅವಕಾಶಗಳನ್ನು ಹೊಂದಿದೆ. ತರಗತಿಯ ಮೊದಲ ದಿನದಿಂದಲೇ ಪರೀಕ್ಷಾ ತಯಾರಿಯನ್ನು ನಡೆಸಿದರೆ ಉತ್ತಮ ಶ್ರೇಣಿಯ ಅಂಕಗಳೊಂದಿಗೆ ಉತ್ತೀರ್ಣರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಕ್ಲಾಸಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆ ಯಶಸ್ವಿನಿ ಯಶ್‌ ಪಾಲ್‌ ಅವರು ಸಿಎ ಕೋರ್ಸಿನ ಬಗ್ಗೆ ಮತ್ತು ಪರೀಕ್ಷಾಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಶಿವಾನಿ ಶೆಣೈ ಅವರು ತರಗತಿ ನಿಯಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಆದಿತ್ಯ ಶೆಟ್ಟಿ ನಿರೂಪಿಸಿ, ಶರಣ್ಯ ವಂದಿಸಿದರು.