ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮಕ್ಕಳು ಕಲಿತು, ಅರ್ಥೈಸಿಕೊಳ್ಳಬೇಕು

ಉಡುಪಿ: ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮಕ್ಕಳು ಕಲಿತು, ಅರ್ಥೈಸಿಕೊಳ್ಳಬೇಕು. ದೇಶಿಯ ಸಂಸ್ಕೃತಿ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ನಡುವೆ ಇರುವ ಅಂತರವನ್ನು ತೊಡೆದು ಹಾಕಲು ತುಳು ಪರ್ಬದಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.

ಮಣಿಪಾಲ ಮಾಹೆ ವಿ.ವಿ.ಯ ವತಿಯಿಂದ ಮಣಿಪಾಲ ಡಾ. ಟಿಎಂಎ ಪೈ ಹಾಲ್ ನಲ್ಲಿ ಇಂದು ಆಯೋಜಿಸಲಾಗಿದ್ದ ‘ಮಾಹೆ-ಆಟಿದ ತುಳು ಪರ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷೆಗಳ ನಡುವಿನ ಸಾಂಸ್ಕೃತಿಕ ಅಂತರವನ್ನು ತೊಡೆದು ಹಾಕಲು ಸೇತುವೆ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳು ಕೆಲಸ ಮಾಡುತ್ತವೆ. ಅಲ್ಲದೆ, ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಕೂಡ ತುಳು ಪರ್ಬದಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಆಟಿಯ ತಿಂಗಳು ಎಂದರೆ ಬಡತನದ ದಿನಗಳು ಎಂದರ್ಥ. ಈ ತಿಂಗಳಿನಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂದರು.

ಮಾಹೆಯ ಚೀಫ್ ಆಪರೇಟಿಂಗ್ ಆಫೀಸರ್ ಡಾ. ರವಿರಾಜ್ ಎನ್.ಎಸ್., ಮಾಹೆಯ ಅಂತರಾಷ್ಟ್ರೀಯ ಸಂಬಂಧಗಳ ನಿರ್ದೇಶಕ ಡಾ. ಕರುಣಾಕರ್ ಕೋಟೆಗಾರ್ ಮಾತನಾಡಿದರು.ಸಚಿನ್ ಕಾರಂತ್, ಪೃಥ್ವಿರಾಜ್ ಕವತ್ತಾರ್ ಉಪಸ್ಥಿತರಿದ್ದರು.

Oplus_0