ಮುಂಬೈ: ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರಾಗಿದ್ದು ಭಾನುವಾರ(ಫೆ.2) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಲಿವುಡ್ ಸಿಂಗರ್ ಸೋನು ನಿಗಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಭಾನುವಾರ ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ನಡುವೆಯೇ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿವೆ.ಭಾನುವಾರ ಸಂಗೀತ ಕಾರ್ಯಕ್ರಮದ ವೇಳೆ ತೀವ್ರ ತರನಾದ ಬೆನ್ನು ನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು ಆದರೂ ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದರು. ಆದರೆ ಕಾರ್ಯಕ್ರಮ ಮುಂದುವರೆದಂತೆ ಬೆನ್ನು ನೋವು ತೀವ್ರವಾದ ಪರಿಣಾಮ ಸಂಗೀತ ಕಾರ್ಯಕ್ರಮದ ನಡುವೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಸ್ವತಃ ಗಾಯಕ ಸೋನು ನಿಗಮ್ ಆಸ್ಪತ್ರೆಯಿಂದಲೇ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ, ವಿಡಿಯೋದಲ್ಲಿ ಹೇಳಿರುವಂತೆ ನಾನು ನನ್ನ ಸಂಗೀತ ಕಾರ್ಯಕ್ರಮದ ವೇಳೆ ವೇದಿಕೆ ತುಂಬಾ ಓಡಾಡಿ ಸಂಗೀತ ಹಾಡುತ್ತೇನೆ ಅದೇ ರೀತಿ ಭಾನುವಾರ ನಡೆದ ಕಾರ್ಯಕ್ರಮದಲ್ಲೂ ವೇದಿಕೆ ತುಂಬೆಲ್ಲಾ ಓಡಾಡಿ ಸಂಗೀತ ಹಾಡುತ್ತಿದ್ದೆ ಆಗ ಒಮ್ಮೆಲೇ ಬೆನ್ನು ನೋವು ಕಾಣಿಸಿಕೊಂಡಿತು ಆದರೆ ಅದನ್ನು ಗಂಭೀರವಾಗಿ ಪರಿಗಣಿಸದೆ ಕಾರ್ಯಕ್ರಮ ಮುಂದುವರೆಸಿದೆ ಆದರೆ ಬೆನ್ನು ನೋವು ಹೆಚ್ಚಾಗತೊಡಗಿತು ಅಲ್ಲದೆ ಯಾರೋ ಬೆನ್ನಿಗೆ ಇಂಜೆಕ್ಷನ್ ಚುಚ್ಚಿದ ರೀತಿ ಭಾಸವಾಯಿತು ಇದಾದ ಬಳಿಕ ವೆಲ್ಪ ನಡೆದಾಡಿದರೂ ವಿಪರೀತ ನೋವು ಕಡಲು ಶುರುವಾಯಿತು ಎಂದು ಹೇಳಿಕೊಂಡಿದ್ದಾರೆ.

ಸದ್ಯ ಸೋನು ನಿಗಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸುಧಾರಿಸುತ್ತಿದೆ ಈ ನಡುವೆ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕ ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.