ಕ್ಷಣ ಕ್ಷಣಕ್ಕೂ, ಪ್ರತಿದಿನವೂ ತಂತ್ರಜ್ಞಾನ ಬದಲಾವಣೆಯ ಹಾದಿ ಹಿಡಿದಿರುವ ಈ ಆಧುನಿಕ ಕಾಲಘಟ್ಟದಲ್ಲಿ ನಾವೆಷ್ಟೇ ಅಪ್ಡೇಟ್ ಇದ್ರೂ, ಸಾಲುವುದಿಲ್ಲ. ಇಂತಹದ್ದರಲ್ಲಿ ನಮ್ಮಲ್ಲಿರುವ ಕೌಶಲ್ಯ, ಬದಲಾವಣೆಗೆ ತೆರೆದುಕೊಂಡು ಅಳವಡಿಸಿಕೊಳ್ಳುವ ಗುಣ ಬಹುಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ಯುವಜನತೆಯನ್ನು ಕೌಶಲ್ಯಯುಕ್ತ ರನ್ನಾಗಿಸಲು ಬಹುವಾಗಿ ಶ್ರಮಿಸುತ್ತಿದೆ ಮಣಿಪಾಲಿನ “ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ”( MSDC). ಈ ಸಂಸ್ಥೆ ಚೆನ್ನೈನ CADD ಕೇಂದ್ರದ ಸಹಯೋಗದೊಂದಿಗೆ, ಈ ಕಾಲದ ತುರ್ತಿಗೆ ಅನುಗುಣವಾಗಿ ಎರಡು ಕೋರ್ಸ್ಗಳನ್ನು ನೀಡುತ್ತಿದೆ. “EV ತಂತ್ರಜ್ಞಾನದಲ್ಲಿ ಕಾರ್ಯನಿರ್ವಾಹಕ ಡಿಪ್ಲೊಮಾ” ಇದು 6 ತಿಂಗಳುಗಳು ಕೋರ್ಸ್ ಆಗಿದ್ದು, ಮೂರು ತಿಂಗಳುಗಳಲ್ಲಿ ಕಲಿಯುವ ಆಸಕ್ತರಿಗೆ “EV ಟೆಕ್ನಾಲಜಿಯಲ್ಲಿ ಸರ್ಟಿಫಿಕೇಟ್ ಕೋರ್ಸ್” ಕೂಡಾ ಇದೆ.
ಬಹು ನಿರೀಕ್ಷಿತ ಕೋರ್ಸ್ ಗಳು ಮುಖ್ಯವಾಗಿ ಉದ್ಯಮ ಚಾಲಿತ ಪಠ್ಯಕ್ರಮವನ್ನು ಹೊಂದಿದ್ದು, ಕ್ಷೇತ್ರದ ತಜ್ಞರಿಂದ ಕೋರ್ಸ್ ನ ತರಬೇತಿ ನೀಡಲಾಗುವುದು.
ಘಟಕಗಳ ವಿನ್ಯಾಸ ಮತ್ತು ವಿಶ್ಲೇಷಣೆಯಲ್ಲಿ ಅತ್ಯಾಧುನಿಕ ಸಾಫ್ಟ್ವೇರ್ಗಳನ್ನು ಬಳಸುವುದು ಮಾತ್ರವಲ್ಲದೇ, ರಿಟ್ರೋಫಿಟಿಂಗ್ ಕಾರ್ಯಾಗಾರವನ್ನು ನಡೆಸಿ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚು ಒತ್ತು ನೀಡುವುದು ಇದರ ಮುಖ್ಯ ಉದ್ದೇಶ.
ಟ್ಯಾಲೆಂಟ್ ವಾಲ್ಟ್ ಮೂಲಕ ಅರ್ಹ ಪ್ರತಿಭೆಗಳಿಗೆ ಉದ್ಯೋಗಾವಕಾಶಗಳನ್ನು ಖಾತರಿಪಡಿಸಲಾಗಿದೆ
ಅಂತಿಮ ವರ್ಷದ ಡಿಪ್ಲೊಮಾ/ಐಟಿಐ ವಿದ್ಯಾರ್ಥಿಗಳು, ಮೆಕ್ಯಾನಿಕಲ್/ಮೆಕಾಟ್ರಾನಿಕ್ಸ್/ಆಟೊಮೊಬೈಲ್ ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಶಾಖೆಗಳಲ್ಲಿ ಓದುತ್ತಿರುವವರು, ಈಗಾಗಲೇ ಈ ಕೋರ್ಸ್ ಗಳನ್ನು ಪೂರ್ಣಗೊಳಿಸಿದವರು ಹಾಗೂ ವೃತ್ತಿಪರರು, ಕೈಗಾರಿಕಾ/ಯಾಂತ್ರಿಕ ವಿನ್ಯಾಸ ಡಿಪ್ಲೋಮಾ ಮಾಡುತ್ತಿರುವವರು ಮಾತ್ರವಲ್ಲದೇ ವಿಶೇಷವೆಂದರೆ, ಕಲೆ/ವಿಜ್ಞಾನ/ವಾಣಿಜ್ಯ ಮುಂತಾದ ಯಾವುದೇ ಪದವಿ ಓದುತ್ತಿರುವ, ಮುಗಿಸಿರುವ ಆಸಕ್ತರೂ ಈ ಕೋರ್ಸ್ ಗೆ ನೋಂದಾಯಿಸಿಕೊಳ್ಳಬಹುದು.
ಜನವರಿ 2025 ರ ಮೊದಲ ವಾರದಲ್ಲಿ ಪ್ರಾರಂಭವಾಗುವ ಈ ಕೋರ್ಸ್ ಗೆ ನೋಂದಾವಣಿ ಈಗಾಗಲೇ ಆರಂಭವಾಗಿದ್ದು, ಮೊದಲು ನೋಂದಾಯಿಸಿದವರಿಗೆ ಆಫರ್ ಕೂಡಾ ಇದೆ. 15.12.2024 ಕ್ಕಿಂತ ಮೊದಲು ನೋಂದಣಿ ಮಾಡಿದರೆ 30% ರಿಯಾಯಿತಿ ಇದ್ದು 16.12.2024 ರಿಂದ 30.12.2024 ರ ನಡುವಿನ ನೋಂದಣಿಗೆ 20% ರಿಯಾಯಿತಿ ಇರುತ್ತದೆ.
ತಡಮಾಡದೇ ಈ ಕೂಡಲೇ ನೋಂದಾಯಿಸಿಕೊಳ್ಳಿ. ಪ್ರತಿಷ್ಟಿತ ಸಂಸ್ಥೆಯಿಂದ, ಅನುಭವವುಳ್ಳ ಪರಿಣಿತರಿಂದ ಜ್ಞಾನಹೊಂದಿ ಉತ್ತಮ ಭವಿಷ್ಯ ನಿಮ್ಮದಾಗಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ, ಡಾ. ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಿಲ್ಕ್ ಡೈರಿ ರಸ್ತೆ, ಈಶ್ವರ್ ನಗರ, ಮಣಿಪಾಲ -576104 ಇಲ್ಲಿಗೆ ಖುದ್ದಾಗಿ ಭೇಟಿ ನೀಡಬಹುದು. ಅಥವಾ ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. 8123163934, 9844729291, 6362849169