ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ.

ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಗ್ನಿಶಾಮಕ ದಳ ಕಿನ್ನಿಮೂಲ್ಕಿ ಉಡುಪಿ ಇದರ ಆವರಣದಲ್ಲಿ ವಿವಿಧ ಬಗೆಯ ಫಲ ಪುಷ್ಪ ಸಸ್ಯಗಳನ್ನು ನೆಡಲಾಯಿತು.

ಮುಖ್ಯ ಅತಿಥಿಯಾಗಿ ಶೂನ್ಯ (ಯೋಗ) ಮಾಸ್ಟರ್ ಧರ್ಮದತ್ತ ದಯಾನಂದ ಕೆ.ಶೆಟ್ಟಿ ಮಾತನಾಡುತ್ತ ಈಗ ನಾವು ಪರಿಸರವನ್ನು ರಕ್ಷಿಸುವ ಜವಬ್ದಾರಿಯನ್ನು ಹೊರಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸಲಾರದು. ಪ್ರಪಂಚವನ್ನು ಬದಲಾಯಿಸುವ ಮೊದಲು ನಾನು ಬದಲಾವಣೆಗೆ ನಾಂದಿಯಾಗಬೇಕು. ಒಂದು ನಾನು ಸಾಧ್ಯವಾದಷ್ಟು ಪರಿಸರಕ್ಕೆ ಹಾನಿಯಾಗುವ ಕೆಲಸವನ್ನು ಮಾಡುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕನಿಷ್ಟಗೊಳಿಸುತ್ತ, ಪ್ರತಿದಿನ ಪರಿಸರ ಕಾಳಜಿಯೊಂದಿಗೆ ಬದಕುತ್ತೇನೆ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಕೆರೆ ನೀಡಿದರು.

ವೇದಿಕೆಯಲ್ಲಿ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಯಶವಂತ್ ಸಾಲಿಯಾನ್, ಕೇಂದ್ರ ಸಮಿತಿಯ ದಿನಕರ್ ಅಮೀನ್, ಅಗ್ನಿಶಾಮಕ ದಳ ಅಧಿಕಾರಿಗಳಾದ ಕೇಶವ್, ಸತೀಶ್, ಜಯಂಟ್ಸ್ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಮನ್ನ, ತೇಜಶ್ವರ ರಾವ್, ರಾಜೇಶ್ ಶೆಟ್ಟಿ, ಜಗದೀಶ್ ಅಮೀನ್, ಲಕ್ಷ್ಮಿಕಾಂತ್ ಬೆಸ್ಕೂರ್, ದಯಾನಂದ ಕಲ್ಮಾಡಿ, ದೇವದಾಸ್ ಕಾಮತ್, ವಾದಿರಾಜ್ ಸಾಲಿಯಾನ್, ಅಗ್ನಿಶಾಮಕದಳದ ಸಿಬ್ಬಂದಿಗಳು ಉಪಸ್ಥರಿದ್ದರು.