ಜನವರಿ 23ರಿಂದ 26ರ ವರೆಗೆ ಕದ್ರಿ ಉದ್ಯಾನವನದಲ್ಲಿ ಫಲ ಪುಷ್ಪ ಪ್ರದರ್ಶನ.

ಕರ್ನಾಟಕ ಸರಕಾರ, ದ.ಕ.ಜಿಲ್ಲೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಹಾಗೂ ಮಂಗಳೂರಿನ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಕದ್ರಿ ಉದ್ಯಾವನದಲ್ಲಿ ಜನವರಿ 23ರಿಂದ 26 ವರೆಗೆ ಫಲ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ವಿವಿಧ ಜಾತಿಯ ಹೂಗಳ ಪ್ರದರ್ಶನ ಹೂ ಮತ್ತು ಸಿರಿಧಾನ್ಯಗಳಿಂದ ರಚಿಸಿದ ವಿವಿಧ ಕಲಾ ಕೃತಿಯ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಿಂದ ರಚಿತವಾದ ಕಲಾ ಕೃತಿ, ರೈತರು ಬೆಳೆದ ಹೂವು, ಹಣ್ಣು,ತರಕಾರಿ, ತೋಟಗಾರಿಕಾ ಬೆಳೆಗಳು, ಸಾಂಬಾರು ಬೆಳೆಗಳು, ಪ್ರದರ್ಶನವನ್ನು ಏರ್ಪಡಿಸಲಾಗಿದೆ.