ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ (ಆಡಳಿತ)ಉಡುಪಿ ಹಾಗೂ ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಕೊಲ್ಲೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ನೆಟ್ ಬಾಲ್ ಪಂದ್ಯಾಟ 2024-25, ಇದರಲ್ಲಿ 14ರ ವಯೋಮಾನದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ರಜತ್(7ನೇ ತರಗತಿ), ಪ್ರವೀಶ್(8ನೇ ತರಗತಿ), ಭರತ್(7ನೇ ತರಗತಿ), ಆಶಿಶ್(8ನೇ ತರಗತಿ) ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
14ರ ವಯೋಮಾನದ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಸಾನ್ವಿ(8ನೇ ತರಗತಿ), ನಿರೀಕ್ಷಾ(8ನೇ ತರಗತಿ), ಅಪೇಕ್ಷಾ ಎಚ್ ಶೆಟ್ಟಿ(7ನೇತರಗತಿ),ಮನಸ್ವಿ (6ನೇ ತರಗತಿ), ಚಾರ್ವಿ(6ನೇ ತರಗತಿ), ಪ್ರಜ್ಞಾ(7ನೇ ತರಗತಿ), ಶರಣ್ಯ(6ನೇ ತರಗತಿ), ಪ್ರಮಿತಿ(6ನೆ ತರಗತಿ), ವೈಭವಿ (6ನೇತರಗತಿ), ಅಜಯಶ್ರೀ(6ನೇ ತ ರಗತಿ) ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ,ಮುಖ್ಯಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.