ಮಂಗಳೂರು, ಏ. 17: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕೂವೆ ಎಂಬ ಸಣ್ಣ ಹಳ್ಳಿಯಿಂದ ಮಂಗಳೂರು ಬಂದು ಬೆಚ್ಯುಲರ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಡಿಗ್ರಿಯಲ್ಲಿ ಗೊಲ್ಡ್ ಮೆಡಲ್ ಜೊತೆಯಲ್ಲಿ ರಿಶಲ್ ತಾವ್ರೊ ಉತ್ತೀರ್ಣರಾಗಿದ್ದರೆ. ಇವರು ಮಂಗಳೂರು ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ವಿಧ್ಯಾರ್ಥಿಯಾಗಿದ್ದರು.
ಇದಕ್ಕೆ ಸಂತಸಗೊಂಡ “ತಾವ್ರೊ ಕುಟುಂಬದ ಸದಸ್ಯರು” ಜೊತೆಗೂಡಿ ಈ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಸನ್ಮಾನ ಮಾಡಿದರು.
ಸನ್ಮಾನವನ್ನು ಮುಖ್ಯ ಅತಿಥಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ(ರಿ) ಇದರ ಅಧ್ಯಕ್ಷ ಹಿರಿಯ ಬಹುಭಾಷಾ ಸಾಹಿತಿ, ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರಿಗೆ ಪ್ರೋತ್ಸಾಹ ಮಾಡುವುದು ಪ್ರೇರಣೆ ಪಡೆಯಲು. ಮುಂದೆ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಇತರರಿಗೆ ಸಹಾಯ ಪ್ರೋತ್ಸಾಹ ನೀಡಬೇಕು.
ಈಗಿನ ವಿದ್ಯಾರ್ಥಿಗಳು ಈತರಹ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಒಳ್ಳೆಯ ಕೆಲಸ ಮಾಡುವಾಗ ತಮ್ಮ ಊರಿನ, ಪ್ರದೇಶದ ಬಡತನದ ಮತ್ತು ಅನಾನುಕೂಲ ಇರುವವರಿಗೆ ಸಹಾಯ ಮಾಡುವ ಮನಸ್ಸು ಹೊಂದಬೇಕು ಎಂದರು.
ಕಾರ್ಯಕ್ರದ ಅಧ್ಯಕ್ಷರಾಗಿ ತಾವ್ರೊ ಕುಟುಂಬದ ಹಿರಿಯರು ಜೋನ್ ತಾವ್ರೊ ವಹಿಸಿದರು. ರಾಜ್ಯ ಶಿಕ್ಷಕರ ಯೂನಿಯನ್ ಇದರ ನಿಕಟ ಉಪಾಧ್ಯಕ್ಷ ಸ್ಟೇನಿ ತಾವ್ರೊ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ರೇಮಂಡ್ ಡಿಕೂನಾ ತಾಕೊಡೆ, ಜೋನ್ ತಾವ್ರೊ, ಸ್ಟೇನಿ ತಾವ್ರೊ, ಗೋಲ್ಡ್ ಮೆಡಲಿಸ್ಟ್ ರಿಶಲ್ ತಾವ್ರೊ, ಅವರ ತಂದೆ ಜೊಸೆಫ್ ತಾವ್ರೊ,ಅಜ್ಜ ಆ್ಯಂಟನಿ ವಾಲ್ಡರ್ ಅವರು ವೇದಿಕೆಯಲ್ಲಿ ಇದ್ದರು..















