ಉಡುಪಿ: ಗುಂಡಿಬೈಲಿನಲ್ಲಿ ಮಾಜಿ ನಗರಸಭಾ ಸದಸ್ಯೆ ಗೀತಾ ಶೇರಿಗಾರ್ ಅವರ ಮನೆಯ ಹತ್ತಿರ ಸಾವನ್ನಪ್ಪಿದ ಗಂಡು ನವಿಲಿನ ದಹನ ಕಾರ್ಯವು ಆದಿ ಉಡುಪಿಯ ಅರಣ್ಯ ಇಲಾಖೆಯ ವಠಾರದಲ್ಲಿ ನಡೆಯಿತು.
ನವಿಲು ಅನಾರೋಗ್ಯದಿಂದ ಸಾವನ್ನಪ್ಪಿದೆಯೆಂದು ತಿಳಿದುಬಂದಿದೆ.
ಗಂಡು ನವಿಲೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರ ಬಗ್ಗೆ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಪಶು ವೈದ್ಯ ಡಾ. ಸಂದೀಪ್ ಕುಮಾರ್ ಅವರು ಚಿಕಿತ್ಸೆಗೆ ಒಳಪಡಿಸಿದರು. ಆದರೆ, ಅದಾಗಲೇ ನವಿಲು ಮೃತಪಟ್ಟಿತ್ತು. ಬಳಿಕ ಒಳಕಾಡುವರು ನವಿಲಿನ ಕಳೇಬರವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿಸಿದರು. ಕೆ. ಬಾಲಗಂಗಾಧರ ರಾವ್ ಸಹಕರಿಸಿದರು.
ಉಡುಪಿ ವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ ಕಳೇಬರವನ್ನು ದಹನ ಗೊಳಿಸಲಾಯಿತು.