ಗಂಗೊಳ್ಳಿ: ಸಮುದ್ರಕ್ಕೆ ಹಾರಿ ವ್ಯಕ್ತಿ ಸಾವು

ಗಂಗೊಳ್ಳಿ: ಬ್ರಹ್ಮಾವರ ಇಂದಿರಾನಗರದ ಮಂಜುನಾಥ (47) ಎಂಬವರ ಮಾವ ಸಂಜೀವ (67) ಎನ್ನುವವರು ಕಳೆದ ಒಂದು ವರ್ಷದಿಂದ ಮೂತ್ರ ಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಮಣಿಪಾಲ ಹಾಗೂ ಉಡುಪಿಯ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.

ಏ. 03 ರಂದು ಮದ್ಯಾಹ್ನ 2 ಗಂಟೆ ಹೊತ್ತಿಗೆ ಪತ್ನಿ ಸರೋಜಿನಿಯವರಲ್ಲಿ ಬ್ರಹ್ಮಾವರಕ್ಕೆ ಔಷಧ ತರಲು ಹೋಗುವುದಾಗಿ ತಿಳಿಸಿದ್ದು ಮನೆಯಿಂದ ಹೊರಹೋದವರು ಮನೆಗೆ ವಾಪಾಸಾಗಿಲ್ಲ. ವಾಪಾಸು ಮನೆಗೆ ಬರದಿದ್ದ ಸಂಜೀವ ಅಂದು ಸಂಜೆ 4 ರಿಂದ 5 ರ ಮದ್ಯಾವಧಿಯಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣಗಳು ಇನ್ನಷ್ಟೇ ತಿಳಿಯಬೇಕಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.