ಕುಂಭಮೇಳಕ್ಕೆ ಬಂದ ಎಲ್ಲರನ್ನು ಖರ್ಗೆ ಮೂರ್ಖರೆಂದು ಹೇಳಿದ ಹಾಗೆ ಆಯ್ತು; ಪೇಜಾವರ ಶ್ರೀ ತಿರುಗೇಟು

ಉಡುಪಿ: ಕುಂಭಮೇಳದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಹೇಳನ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಖರ್ಗೆ ಅವರದ್ದು ಬಾಲಿಶ ಹೇಳಿಕೆ. ಈ ಹೇಳಿಕೆಯಿಂದ ಅವರ ಆಶಯ ತೆರೆದಿಟ್ಟಿದೆ. ಇಂತಹ ಹೇಳಿಕೆ ಅವರ ಘನತೆಗೆ ತಕ್ಕದಾದ್ದಲ್ಲ. ಮಹಾಕುಂಭಮೇಳದಲ್ಲಿ ಮಿಂದ ಎಲ್ಲ ಮಂದಿ ಮೂರ್ಖರಾ?. ಕುಂಭಮೇಳಕ್ಕೆ ಬಂದ ಎಲ್ಲರನ್ನ ಖರ್ಗೆ ಅವರು ಮೂರ್ಖರೆಂದು ಹೇಳಿದ ಹಾಗೆ ಆಯ್ತು ಎಂದು ತಿರುಗೇಟು ನೀಡಿದರು.

ಯಾರೂ ಕೂಡಾ ಬಹುಮತವನ್ನು ಕಡೆಗಣಿಸಬೇಡಿ. ಬಹುಮತದ ಎಲ್ಲರ ಭಾವನೆಯನ್ನು ನಾವು ಗೌರವಿಸಬೇಕು. ಎಲ್ಲರ ಭಾವನೆ ಗೌರವಿಸಬೇಕು ಯಾರನ್ನು ನೋಯಿಸಬಾರದು. ದೇಶ ವಿದೇಶದಿಂದ ಜನ ಬರ್ತಾಯಿದ್ದಾರೆ. ರಾಜಕೀಯ ಪಕ್ಷಗಳು ಎಲ್ಲರೂ ಮತಭೇದ ಮರೆತು ಯಶಸ್ಸಿಗೆ ಕೈಜೋಡಿಸಬೇಕು. ಏಕ ಮನಸ್ಸಿನಿಂದ ಒಮ್ಮನಸಿನಿಂದ ಎಲ್ಲರೂ ವರ್ತನೆ ಮಾಡಬೇಕು ಎಂದರು.