ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ಗೆ ಹೋದ ಕಾರ್ಕಳದ ವ್ಯಕ್ತಿ ನಾಪತ್ತೆ

ಕಾರ್ಕಳ: ಕುಂಭಮೇಳಕ್ಕೆ ಪ್ರಯಾಗ್‌ರಾಜ್ ರೈಲಿನಲ್ಲಿ ಹೊರಟ ಕಾರ್ಕಳ ಕಾಬೆಟ್ಟು ವಿ.ಸಿ.ರೋಡ್‌ನ ಭಾರತ್ ಬೀಡಿ ಕಾಲನಿ ನಿವಾಸಿ ಸುಧಾಕರ್(69) ಎಂಬವರು ನಾಪತ್ತೆಯಾಗಿದ್ದಾರೆ.

ಇವರು ಜ.25ರಂದು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದರು. ಹೋಗುವಾಗ ರೈಲು ಅದಲು ಬದಲಾಗಿ ಮಾರ್ಗ ತಪ್ಪಿರುವುದಾಗಿ ಮಗ ಶಿವಪ್ರಸಾದ್‌ಗೆ ತಿಳಿಸಿದ್ದರು. ಜ.27ರಂದು ಶಿವಪ್ರಸಾದ್ ಕರೆ ಮಾಡಿದಾಗ ಸುಧಾಕರ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಇವರು ಈವರೆಗೆ ವಾಪಾಸು ಮನೆಗೆ ಬಾರದೇ ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.