ಕುಂದಾಪುರ ನ.14:ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮಲ್ಲಿ ನಕರಾತ್ಮಕ ಯೋಚನೆಗಳು ಬರಬಾರದು. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಇವತ್ತು ಬಹುತೇಕ ಅವಘಡಗಳಿಗೆ ಮೊಬೈಲ್ ಬಳಕೆಯೇ ನೆಪವಾಗುತ್ತಿದೆ. ಆತ್ಮಹತ್ಯೆ ಯಂತಹ ನಕರಾತ್ಮಕ ಯೋಚನೆಗಳು ಮನಸಿನಲ್ಲಿ ಮೂಡಬಾರದು ಎಂದು ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು.
ನ.12ರಂದು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ ಬ್ಯುಸಿನೆಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಸೇವಕ ರವಿ ಕಟಪಾಡಿ, ಬದುಕು ನಾವು ಭಾವಿಸಿದಂತೆ ಇರುವುದಿಲ್ಲ ನಾವು ಏನೆಂಬುದನ್ನು ಸಾಧಿಸಿ ತೋರಿಸಬೇಕು ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಖಾಸಗಿ ಕಾಲೇಜುಗಳಲ್ಲಿ ಕಲಾ ವಿಭಾಗಕ್ಕೆ ಅವಕಾಶ ಕಡಿಮೆ. ಜನತಾ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಕಲಾ ವಿಭಾಗವೂ ಆರಂಭವಾಗಲಿ ಎಂದರು.
ವಿದ್ಯಾರ್ಥಿ ಸೃಷ್ಟಿ ಇನ್ಫೋಟೆಕ್ನ ಹರ್ಷವರ್ಧನ್ ಶೆಟ್ಟಿ ಪ್ರಗತಿ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕುಂದಾಪುರ ಜೇಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಗೋವ ಉದ್ಯಮಿ ಸುರೇಶ ಪೂಜಾರಿ, ರಾಜಾರಾಮ ಗುರೂಜಿ ಯಡಮೊಗೆ, ಜನತಾ ಸಂಸ್ಥೆಯ ಮಾರ್ಗದರ್ಶಕರಾದ ಚಿತ್ರಾ ಕಾರಂತ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳಾವರ, ಜನತಾ ಇಂಗ್ಲಿಷ್ ಮಿಡಿಯಂ ಸ್ಕೂಲ್ನ
ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಸಂಸ್ಥೆಯ ಉಪ ಪ್ರಾಂಶುಪಾಲ ರಮೇಶ ಪೂಜಾರಿ ಉಪಸ್ಥಿತರಿದ್ದರು.
ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ, ಅಧ್ಯಕ್ಷ ಗಣೇಶ ಮೊಗವೀರ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ವಂದಿಸಿ, ಉಪನ್ಯಾಸಕ ಉದಯ ನಾಯ್ಕ್ ನಿರ್ವಹಿಸಿದರು.
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸುಮಾರು 50 ಮಳಿಗೆಗಳನ್ನು ತೆರೆದಿದ್ದರು. ವೈವಿಧ್ಯಮಯವಾದ ಮಳಿಗೆಗಳು ವಿದ್ಯಾರ್ಥಿಗಳ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಯಿತು. ತಿಂಡಿ ತಿನಿಸು ಸ್ಟಾಲ್ಗಳು, ಸಸ್ಯಹಾರಿ,ಮಾಂಸಹಾರಿ ಹೋಟೆಲ್,ಐಸ್ ಕ್ರೀಮ್, ತಂಪು ಪಾನೀಯ, ಎಳನೀರು, ಫೋಟಾಟೊ ಟ್ವಿಸ್ಟರ್ ಸಿಹಿ ತಿಂಡಿ ಸ್ಟಾಲ್, ಚರ್ಮುರಿ, ಉಪ್ಕರಿ, ಚಾಟ್ಸ್,
ಹಾರರ್ ಜೂಮ್, ಗೇಮ್ಸ್, ನರ್ಸರಿ, ದಿನಬಳಕೆ ವಸ್ತುಗಳು, ಕರಿದ ತಿನಿಸುಗಳು, ಗೋಲಿ ಸೋಡ, ಜ್ಯೂಸ್,ಬಟ್ಟೆ, ಮೆಹಂದಿ, ಸ್ಟೇಷನರಿ ವಸ್ತುಗಳ ಮಳಿಗೆ ಇತ್ಯಾದಿ ಮಳಿಗೆಗಳು ಇದ್ದವು.ಹೊರಾಂಗಣದಲ್ಲಿ 50 ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿದರು.