ಕುಂದಾಪುರ: ವ್ಯಕ್ತಿ ನಾಪತ್ತೆ.

ಕುಂದಾಪುರ, ಆಗಸ್ಟ್ 02: ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಹೊಸಬಾಳು ನಿವಾಸಿ ಅಣ್ಣಪ್ಪ (40) ಎಂಬ ವ್ಯಕ್ತಿಯು ಮಾರ್ಚ್ 12 ರಂದು ಮನೆಯಿಂದ ಬೆಂಗಳೂರಿಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ 5 ಇಂಚು ಎತ್ತರ, ಎಣ್ಣೆಕಪ್ಪು ಮೈ ಬಣ್ಣ ಹೊಂದಿರುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08259-280299, ಮೊ.ನಂ:8277988963, ಮೊ.ನಂ:9480805456, ಕುಂದಾಪುರ ವೃತ್ತ ನಿರೀಕ್ಷಕರ ದೂ.ಸಂಖ್ಯೆ: 08254-230880 ಅಥವಾ ಉಡುಪಿ ಕಂಟ್ರೋಲ್ ರೂಮ್ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.