ಕುಂದಾಪುರ: ಬೈಕುಗಳ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು, ಇಬ್ಬರು ಗಂಭೀರ.

ಕುಂದಾಪುರ ಸೆ.29: ನಗರ ಸಮೀಪದ ಹಂಗಳೂರಿನ ನಸರ್ವಿಸ್ ರಸ್ತೆಯಲ್ಲಿ ಬೈಕುಗಳೆರಡು ಮುಖಾಮುಖಿ ಡಿಕ್ಕಿ ಆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮೃತಪಟ್ಟ ಬೈಕ್ ಸವಾರ ಕುಂದಾಪುರದ ಬಾಳೆಹಿತ್ತು ನಿವಾಸ ವೆಂಕಟೇಶ್ ಅವರ ಪುತ್ರ ಖಾಸಗಿ ಕಂಪನಿಯೊಂದರ ಉದ್ಯೋಗಿ ಶಶಾಂಕ್ ಮೊಗವೀರ(22). ಶಶಾಂಕ್ ಮೊಗವೀರ ಅವರು ನಿನ್ನೆ ರಾತ್ರಿ 11ರ ವೇಳೆಗೆ ಹಂಗಳೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ಹಿಂತಿರುಗುವ ಸಮಯದಲ್ಲಿn ಅಪಘಾತ ನಡೆದಿದೆ. ತಕ್ಷಣ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಾಗಲೇ ಅವರು ವೈದ್ಯರು ಶಶಾಂಕ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಬುಲೆಟ್ ಸವಾರ ಮತ್ತು ಹಿಂದೆ ಕುಳಿತಿದ್ದ ಮಹಿಳೆಯೂ ಗಂಭೀರ ಗಾಯಗೊಂಡಿದ್ದು ಇಬ್ಬರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.