ಕುಂದಾಪುರ ನಗರದಲ್ಲಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ.

ಕುಂದಾಪುರ: ಜನರಿಗೆ ನಾವು ಮಾಡಿದ ಕೆಲಸಗಳ ಲೆಕ್ಕ ಕೊಟ್ಟು ಅಭ್ಯರ್ಥಿ ಹೆಸರಲ್ಲೇ ಚುನಾವಣೆಯಲ್ಲಿ ಮತ ಕೇಳಬೇಕು. ಕೆಲಸ ಮಾಡಿದ ಆತ್ಮತೃಪ್ತಿ ಜನಪ್ರತಿನಿಧಿಗೆ ಇರಬೇಕು. ನಾವು ಜನಕ್ಕೆ ಮಾಡುವುದು ಸೇವೆಯಲ್ಲ, ಬದಲಾಗಿ ಅದು ಕರ್ತವ್ಯ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ಕುಂದಾಪುರ ಪೇಟೆಯಲ್ಲಿ ಹಮ್ಮಿಕೊಳ್ಳಲಾದ ಪಾದಯಾತ್ರೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿಶನ್ ಡಾಕ್ಯುಮೆಂಟ್ ಮಾಡಿದ್ದು ಉಡುಪಿ ಜಿಲ್ಲೆಗೆ ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪರಿಸರ ಸ್ನೇಹಿ ಉದ್ಯಮಗಳ ಸ್ಥಾಪನೆ, ಪ್ರವಾಸೋಧ್ಯಮಕ್ಕೆ ಒತ್ತು ನೀಡಲಾಗುತ್ತದೆ. ಕರಾವಳಿ ಭಾಗದಲ್ಲಿ ಪ್ರವಾಸೋಧ್ಯಮಕ್ಕೆ ವಿಫುಲ ಅವಕಾಶಗಳಿದೆ. ಅಂತೆಯೇ ಧಾರ್ಮಿಕ ಪ್ರವಾಸೋಧ್ಯಮಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.