ಕುಂದಾಪುರ: ತೀರ್ಥಯಾತ್ರೆಗೆ ಬಂದ ಬೆಂಗಳೂರಿನ ವ್ಯಕ್ತಿ ಮೃತ್ಯು.

ಉಡುಪಿ: ಸ್ನೇಹಿತನ ಕಾರಿನಲ್ಲಿ ಕರಾವಳಿಯ ದೇವಸ್ಥಾನಗಳಿಗೆ ತೀರ್ಥ ಯಾತ್ರೆಗೆಂದು ಬಂದ ಹಿರಿಯ ವ್ಯಕ್ತಿಯೊಬ್ಬರು ಕುಂಭಾಶಿ ಆನೆಗುಡ್ಡೆಯಲ್ಲಿದ್ದಾಗ ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಕೇಶವಮೂರ್ತಿ ಎಂದು ಗುರುತಿಸಲಾಗಿದೆ. ಇವರು ಸ್ನೇಹಿತ ಶಿವಣ್ಣರ ಹೊಸ ಕಾರಿಯಲ್ಲಿ ಕರಾವಳಿಗೆ ತೀರ್ಥಯಾತ್ರೆಗೆಂದು ಬಂದಿದ್ದರು.ತೀವ್ರವಾದ ಸಕ್ಕರೆ ಕಾಯಿಲೆ ಹಾಗೂ ಎದೆನೋವಿನಿಂದ ಬಳಲುತಿದ್ದ ಕೇಶವಮೂರ್ತಿ ಅವರು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿರಬೇಕೆಂದು ಹೇಳಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.