ಕುಂದಾಪುರ: ಕುಂದಾಪುರ ತಾಲೂಕು ಜಪ್ತಿ ಗ್ರಾಮದಲ್ಲಿ ಫ್ಯಾಕ್ಟರಿಯ ಕಟ್ಟಡದಿಂದ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಅ.21ರಂದು ರಾತ್ರಿ ನಡೆದಿದೆ.
ಮೃತರನ್ನು ಜಾರ್ಖಾಂಡ್ ರಾಜ್ಯದ ಲೋಹರ್ದಗಾ ಜಿಲ್ಲೆಯ ಜೋಗಿಂದರ್ ಒರೋನ್(30) ಎಂದು ಗುರುತಿಸಲಾಗಿದೆ.
ಭಾರತ್ ಹ್ಯೂಮ್ ಪೈಪ್ ಪ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಮದ್ಯಪಾನ ಮಾಡಿ, ಪ್ಯಾಕ್ಟರಿ ಕಟ್ಟಡದ ಸ್ಲಾಬ್ನ ಮೇಲೆ ಮೊಬೈಲ್ನಲ್ಲಿ ಮಾತನಾಡುತಿದ್ದರು. ಈ ವೇಳೆ ಅವರು ಸುಮಾರು 15 ಅಡಿ ಎತ್ತರದಿಂದ ಕೆಳಗಡೆ ಸಿಮೆಂಟ್ ನೆಲದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.