ಕುಂದಾಪುರ: ಆರ್ಗೋಡ ಜಗನ್ನಾಥ ಶೆಣೈ ನಿಧನ

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು, ವಂಡ್ಸೆ ಹೋಬಳಿಯ ಕಮಲಶಿಲೆ ಗ್ರಾಮದ ಆರ್ಗೋಡನಲ್ಲಿ ಅಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ದಿವಂಗತ ನಾಗಪ್ಪ ಶೆಣೈ ಮತ್ತು ದಿ. ರಾಜೀವಿ ಶೆಣೈ ರವರ ಮಗ ಸುಮಾರು 81 ವರ್ಷ ಪ್ರಾಯದ ಜಗನ್ನಾಥ ಶೆಣೈ ರವರು ಅನಾರೋಗ್ಯದಿಂದ ಅ.24 ರಂದು ನಿಧನ ಹೊಂದಿದರು.

ಮೃತರು ಮಾನಂಜೆ ವ್ಯವಸಾಯ ಸೇವಾ ಕ್ರಷಿ ಸಹಕಾರಿ ಸಂಘದ ಮಾಜಿ ನಿರ್ದೇಶಕರು ಹಾಗೂ ಉಪಾಧ್ಯಕ್ಷರಾಗಿ, ಪ್ರಗತಿಪರ ಕೃಷಿಕರು, ಯಕ್ಷಗಾನ ಕಲೆಯ ಮಹಾ ಪೋಷಕರು ಆಗಿದ್ದರು.

ಮ್ರತರು ಪತ್ನಿ, ನಾಲ್ಕು ಹೆಣ್ಣು ಮಕ್ಕಳನ್ನು ಹಾಗು ಆಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.