ಕುಂದಾಪುರ: ಕುಂದಾಪುರವು ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಜನರಿಗೆ ಜನನಿ ಎಂಟರ್‌ಪ್ರೈಸಸ್‌ನ ಶಾಖೆ ಆರಂಭವಾದ ಕಾರಣ ಖರೀದಿಗೆ ಅನುಕೂಲವಾಗಲಿದೆ. ನಗರ ಹಾಗೂ ಗ್ರಾಮಾಂತರದ ಜನತೆ ಖರೀದಿಯ ಖುಷಿಯನ್ನು ಈ ಮಳಿಗೆಯ ಮೂಲಕ ಅನುಭವಿಸಲಿ ಎಂದು ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.
ಅವರು ರವಿವಾರ ಕುಂದಾಪುರದ ಹಂಗಳೂರಿನ ಯುನಿಟಿ ಹಾಲ್ ಬಳಿ ಯುವ ದ್ವೀಪ ವಸತಿ ಸಂಕೀರ್ಣದಲ್ಲಿ ಗೃಹೋಪಯೋಗಿ ಉಪಕರಣಗಳ ಪ್ರಸಿದ್ಧ ಮಳಿಗೆಯಾಗಿರುವ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನ ಎರಡನೇ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಅಪಾರ ಸಂಗ್ರಹ:
ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ 12 ಸಾವಿರ ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ವಿಶಾಲ ಮಳಿಗೆಯಲ್ಲಿ ನವನವೀನ ಮಾದರಿಯ ಪೀಠೋಪಕರಣ, ಅಡುಗೆ ಮನೆ ಉಪಕರಣಗಳು, ಟಿವಿ, ಮೊಬೈಲ್, ಫ್ರಿಜ್ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳು ಆಕರ್ಷಕ ಬೆಲೆಯಲ್ಲಿ ಲಭ್ಯ. 4 ಆರ್ಥಿಕ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡ ಸಂಸ್ಥೆ ಗ್ರಾಹಕರಿಗೆ ಶೂನ್ಯ ಬಡ್ಡಿದರದಲ್ಲಿ ಕಂತುಗಳಲ್ಲಿ ಪಾವತಿ ವ್ಯವಸ್ಥೆ ಶೂನ್ಯ ಪಾವತಿಯಲ್ಲಿ ವಸ್ತುಗಳ ಖರೀದಿ ಮೊದಲಾದ ಕೊಡುಗೆಗಳನ್ನು ನೀಡುತ್ತಿದೆ.

ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ ಅಧ್ಯಕ್ಷತೆವಹಿಸಿ, ಕುಂದಾಪುರದಲ್ಲಿ ಹೊಸ ಹೊಸ ಮಳಿಗೆಗಳು ತೆರೆಯುವುದು ಉತ್ತಮ ಬೆಳವಣಿಗೆ ಎಂದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ, ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ಹಂಗಳೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಪೂಜಾರಿ ಜಿ.ಎಸ್., ಉಡುಪಿ ಉಜ್ವಲ್ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಪುರುಷೋತ್ತಮ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಟ್ಟಡದ ಮಾಲಕ ಮುಂಬಯಿ ಉದ್ಯಮಿ ವಿಜಯ್ ಕುಮಾರ್ ಶೆಟ್ಟಿ ಚಿತ್ತೂರು, ಕೆಎಂಎಫ್ ಮಾಜಿ ನಿರ್ದೇಶಕ ಕಾಡೂರು ಸುರೇಶ್ ಶೆಟ್ಟಿ, ಜನನಿ ಎಂಟರ್‌ಪ್ರೈಸಸ್ ಪಾಲುದಾರರಾದ ಯತೀಶ್ ಕರ್ಕೇರ ಮಲ್ಪೆ ಹರೀಶ್ ಶೆಟ್ಟಿ ಹೊಸಾಳ, ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.ಸ್ಪೀಕರ್ ಯು.ಟಿ. ಖಾದರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮಾಂಡವಿ ಬಿಲ್ಡರ್ಸ್ನ ಗ್ಲೆನ್ ಡಯಾಸ್ ಮತ್ತಿತರರು ಶುಭ ಹಾರೈಸಿದರು.
ಸಂಸ್ಥೆಯ ಪಾಲುದಾರ ಪ್ರಶಾಂತ್ ಕಾಡೂರು ಸ್ವಾಗತಿಸಿ, ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ನಿರ್ವಹಿಸಿದರು.












