ಕುಂಜಾರುಗಿರಿ: ಭಯ ಹುಟ್ಟಿಸಿದ್ದ ಭಾರೀ ಗಾತ್ರದ ಚಿರತೆ ಸೆರೆ

ಉಡುಪಿ: ಕಾಪು ತಾಲೂಕಿನ ಕುಂಜಾರು ಗಿರಿ ಪರಿಸರದಲ್ಲಿ ರಾಶಿ ಹಾಕಿದ ಶಿಲೆ ಕಲ್ಲುಗಳ ಮಧ್ಯೆ ವಾಸವಾಗಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಪು ತಾಲೂಕಿನಾದ್ಯಂತ ಚಿರತೆ ಭಯ ಹುಟ್ಟಿಸಿತ್ತು‌‌. ಚಿರತೆಯ ಹಾವಳಿಯಿಂದ ಕುಂಜಾರು ಪರಿಸರದ ಗ್ರಾಮಸ್ಥರು ಭಯದಿಂದಲೇ ಓಡಾಟ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಲ್ಲದೆ, ಅಂಗನವಾಡಿಗಳಿಗೂ ರಜೆ ನೀಡಲಾಗಿತ್ತು. ರಾತ್ರಿ ಆಗುತ್ತಿದ್ದಂತೆ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯ ಪಡುತ್ತಿದ್ದರು‌. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಸಿಬ್ಬಂದಿ, ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Oplus_0