ಕಿರಿಮಂಜೇಶ್ವರ ಶಾಲೆಗೆ ಮರುನಾಮಕರಣ

ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆಯನ್ನು ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಎಂದು ಪುನರ್ ನಾಮಕರಣ ಮಾಡಲಾಗಿದೆ.

(ಸಂ:ಜಿ1:ಶಾ.ಹೆ.ಬ:360398:01:2024-25) ಶುಭದಾ ಎಜುಕೇಶನಲ್ ಟ್ರಸ್ಟ್ ನಡೆಸುತ್ತಿರುವ ಶುಭದಾ ಆಂಗ್ಲ ಮಾಧ್ಯಮ ಶಾಲೆಯು 2024-25ನೇ ಶೈಕ್ಷಣಿಕ ವರ್ಷದಿಂದ ನೂತನ‌ ಆಡಳಿತ ಮಂಡಳಿಯವರು ಈ ಸಂಸ್ಥೆಯನ್ನು ‌ಮುನ್ನಡೆಸುತ್ತಿರುವುದರಿಂದ ಶಾಲಾ ಹೆಸರು ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ (JANATHA NEW ENGLISH MEDIUM SCHOOL) ಕಿರಿಮಂಜೇಶ್ವರ ಎಂದು ಬದಲಾಯಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.