ಕಾಸರಗೋಡು: ಕಾಸರಗೋಡಿನ ಚೀಮೇನಿ ಕನಿಯಾಂದಲದಲ್ಲಿ ಅವಳಿ ಸಹೋದರರು ಕಲ್ಲಿನ ಕ್ವಾರಿಯಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಚೀಮೇನಿ ಕನಿಯಾಂದಲದಲ್ಲಿ ರಾಧಾಕೃಷ್ಣ ಅವರ ಮಕ್ಕಳಾದ ಸುದೇವ್(10) ಹಾಗೂ ಶ್ರೀದೇವಿ(10) ಮೃತರು.
ಚೀಮೇನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು. ಮಧ್ಯಾಹ್ನ ಇಬ್ಬರು ಕೂಡ ಆಟವಾಡುವುದಕ್ಕೆಂದು ಸೈಕಲ್‌ನಲ್ಲಿ ತೆರಳಿದ್ದು, ಸಂಜೆಯಾದರೂ ಮನೆಗೆ ಆಗಮಿಸದ ಹಿನ್ನಲೆಯಲ್ಲಿ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಕ್ವಾರಿ ಬಳಿ ಸೈಕಲ್ ಪತ್ತೆಯಾಗಿದೆ. ಸಂಶಯಗೊಂಡು ತೀವ್ರವಾಗಿ ಶೋಧಾ ಕಾರ್ಯ ನಡೆಸಿದಾಗ ಕ್ವಾರಿಯಲ್ಲಿ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಮೃತದೇಹವನ್ನು ಮೇಲೆತ್ತಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.