ಕಾರ್ಕಳ: ಮನೆ ಬಳಿ ಹಾಡಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ.

ಕಾರ್ಕಳ: ವೈಯಕ್ತಿಕ ಕಾರಣದಿಂದ ಮನನೊಂದ ಸೂಡಾ ಗ್ರಾಮದ ಬುಟ್ಟಿಮಾರ್ ಕಟ್ಟಿಯಂಗಡಿ ನಿವಾಸಿ ಸುರೇಶ(50) ಎಂಬವರು ಜೂ.29 ರಂದು ಮಧ್ಯಾಹ್ನ ಮನೆ ಬಳಿಯ ಹಾಡಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.